ಅಹಮದಾಬಾದ್ : ಗುಜರಾತ್‌ನ ಸಬರಕಾಂತ ಜಿಲ್ಲೆಯ ಹಿಮ್ಮತ್‌ನಗರದ ನಿವಾಸಿಗಳಾದ ಭವೇಶ್‌ಭಾಯ್ ಭಂಡಾರಿ ಮತ್ತು ಅವರ ಪತ್ನಿ ಜಿನಾಲ್ ಭಂಡಾರಿ ಅವರು ಉದಾರವಾಗಿ ಸುಮಾರು 200 ಕೋಟಿ ರೂ. ಮೌಲ್ಯದ ಸಂಪತ್ತನೆಲ್ಲಾ ದಾನ ಮಾಡಿ ಸನ್ಯಾಸ ಸ್ವೀಕರಿಸಿದ್ದಾರೆ. ಈ ಮೂಲಕ ಭಕ್ತಿ ಹಾಗೂ ನಿಸ್ವಾರ್ಥತೆಯನ್ನು ಎತ್ತಿ ತೋರಿಸಿದ್ದಾರೆ.
ಗುಜರಾತ್ ಮೂಲದ ಉದ್ಯಮಿ ಮತ್ತು ಅವರ ಪತ್ನಿ ತಮ್ಮ ಜೀವಮಾನದ ಗಳಿಕೆಯ 200 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ ಮತ್ತು ಸನ್ಯಾಸವನ್ನು ಅಳವಡಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ, ಭಾವೇಶ್ ಭಂಡಾರಿ ಮತ್ತು ಅವರ ಪತ್ನಿ ಸಮಾರಂಭವೊಂದರಲ್ಲಿ ತಮ್ಮ ಎಲ್ಲಾ ಸಂಪತ್ತನ್ನು ದಾನ ಮಾಡಿದರು.
ಫೆಬ್ರವರಿಯಲ್ಲಿ ನಡೆದ ಸಮಾರಂಭದಲ್ಲಿ ತಮ್ಮ ಎಲ್ಲಾ ಸಂಪತ್ತನ್ನು ದಾನ ಮಾಡಿದ ನಂತರ ಮೋಕ್ಷಕ್ಕಾಗಿ ಸನ್ಯಾಸತ್ವ ಸ್ವೀಕರಿಸುವ ನಿರ್ಧಾರ ತೆಗೆದುಕೊಳ್ಳುತ್ತಾರೆ. 2022 ರಲ್ಲಿ ಸನ್ಯಾಸ್ಯತ್ವ ಸ್ವೀಕರಿಸಿದ ಅವರ 19 ವರ್ಷದ ಮಗಳು ಮತ್ತು 16 ವರ್ಷದ ಮಗನ ದಾರಿಯನ್ನು ಅವರು ಅನುಸರಿಸಿದ್ದಾರೆ. ಈ ಹಿಂದೆ ನಿರ್ಮಾಣ ವ್ಯವಹಾರದಲ್ಲಿ ತೊಡಗಿದ್ದ ಭವೇಶ್‌ಭಾಯ್ ಮತ್ತು ಅವರ ಪತ್ನಿ ತಮ್ಮ ಮಕ್ಕಳಿಂದ ಸ್ಫೂರ್ತಿ ಪಡೆದ ದಂಪತಿ ಕೂಡ ಇದೀಗ ಆಸ್ತಿ ಸಂಪತ್ತನ್ನು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಲು ಮುಂದಾಗಿದ್ದಾರೆ.
ಕುಟುಂಬದ ಮಹಿಳೆಯೊಬ್ಬರು ಒಂದೂವರೆ ತಿಂಗಳ ಹಿಂದೆ ಸೂರತ್‌ನಲ್ಲಿ ದೀಕ್ಷೆಯನ್ನು ತೆಗೆದುಕೊಂಡಿದ್ದರು. ಇದನ್ನು ತಂದೆ-ಮಗ ಹಾಗೂ ಮೊಮ್ಮಗನು ಅನುಸರಿಸಿದರು. ಗಮನಾರ್ಹ ಸಂಗತಿಯೇನೆಂದರೆ ಮೊಮ್ಮಗ ತನ್ನ ಸಿಎ ಅಂತಿಮ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದಾನೆ. ಇದು ರಾಜ್ಯದಲ್ಲಿ ಮೂರು ತಲೆಮಾರುಗಳು ಏಕಕಾಲದಲ್ಲಿ ಸನ್ಯಾಸಿತ್ವವನ್ನು ಸ್ವೀಕರಿಸಿದ ಮೊದಲ ಉದಾಹರಣೆಯಾಗಿದೆ. ಅಜಿತಭಾಯಿ ಶಾಂತಿಲಾಲ್ ಶಾ ಅವರು ಮೂಲತಃ ಸಿನ್ಹೋರ್‌ನವರು ಮತ್ತು ಈಗ ಜಾಮ್‌ನಗರದಲ್ಲಿ ನೆಲೆಸಿದ್ದಾರೆ.ಅವರ ಮಗ ಕೌಶಿಕಭಾಯಿ ಅಜಿತ್‌ಭಾಯ್ ಶಾ ಮತ್ತು ಮೊಮ್ಮಗ ವಿರಾಲ್‌ಭಾಯ್ ಕೌಶಿಕಭಾಯಿ ಶಾ ಅವರೊಂದಿಗೆ ಸನ್ಯಾಸತ್ವದ ಹಾದಿಯನ್ನು ಪ್ರಾರಂಭಿಸುವ ಬಯಕೆಯನ್ನು ವ್ಯಕ್ತಪಡಿಸಿದರು.