Tuesday, October 21, 2025
Flats for sale
Homeದೇಶಅಹಮದಾಬಾದ್ : ಬೆಂಗಳೂರಿನಲ್ಲಿ ಅಡಗಿದ್ದ ಅಲ್ ಖೈದಾ ಉಗ್ರ ಭಯೋತ್ಪಾದಕ ಘಟಕದ ನಾಯಕಿಯ ಬಂಧನ..!

ಅಹಮದಾಬಾದ್ : ಬೆಂಗಳೂರಿನಲ್ಲಿ ಅಡಗಿದ್ದ ಅಲ್ ಖೈದಾ ಉಗ್ರ ಭಯೋತ್ಪಾದಕ ಘಟಕದ ನಾಯಕಿಯ ಬಂಧನ..!

ಅಹಮದಾಬಾದ್ : ಖೈದಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿ ಕರ್ನಾಟಕದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುತ್ತಾ ಬೆಂಗಳೂರಿನಲ್ಲಿ ಅಡಗಿದ್ದ ಅಲ್ ಖೈದಾ ಭಯೋತ್ಪಾದಕ ಘಟಕದ ನಾಯಕಿಯನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದ ಅಧಿಕಾರಿಗಳು ಬಂಧಿಸಿ ತೀವ್ರ ವಿಚಾರಣೆ ಕೈಗೊಂಡಿದ್ದಾರೆ.

ಬೆAಗಳೂರಿನಲ್ಲಿ ಅಡಗಿರುವ ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡ ಎಟಿಎಸ್ ಅಧಿಕಾರಿಗಳು ಅಲ್ ಖೈದಾ ಭಯೋತ್ಪಾದಕ ಘಟಕದ ನಾಯಕಿಯ ಶಮಾ ಪರ್ವೀನ್(30)ಳನ್ನು ಬಂಧಿಸಿ ಗುಜರಾತ್ ಗೆ ಕರೆತಂದು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಅರೋಪಿಯು ದೇಶ ವಿರೋಧಿ ಕೃತ್ಯಗಳನ್ನು ಮಾಡುವ ಮೂಲಕ ಜಿಹಾದಿಚಟುವಟಿಕೆಗಳಲ್ಲಿ ಶಾಮೀಲಾಗಿದ್ದಳು ಎಂಬ ಆರೋಪವಿದ್ದು ಹೆಚ್ಚಿನ ತನಿಖೆಯನ್ನು ಕೈಗೊಂಡು ಕೇಂದ್ರ ತನಿಖಾ ತಂಡಗಳಿಗೂ ಮಾಹಿತಿಯನ್ನು ನೀಡಲಾಗಿದೆ. ಗುಜರಾತ್ ಎಟಿಎಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಈ ಹಿಂದೆ ಬಂಧಿಸಲಾದ ನಾಲ್ವರು ಭಯೋತ್ಪಾದಕರೊಂದಿಗೆ ಶಮಾ ಪರ್ವೀನ್ ಸಂಪರ್ಕದಲ್ಲಿದ್ದಳು. ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬAಧಿಸಿದ ಇನ್‌ಸ್ಟಾಗ್ರಾಂ ಗುಂಪಿನಲ್ಲಿ ಸಕ್ರಿಯಳಾಗಿದ್ದಳು ಮತ್ತು ದೇಶ ವಿರೋಧಿ ವೀಡಿಯೊಗಳನ್ನು ಅಪ್‌ಲೋಡ್ ಮಾಡುವ ಮೂಲಕ ಯುವಕರನ್ನು ಜಿಹಾದಿ ಕೃತ್ಯಗಳಿಗೆ ಪ್ರಚೋದಿಸುತ್ತಿದ್ದಳು.

ಶಮಾ ಪರ್ವೀನ್ ಭಯೋತ್ಪಾದಕ ಚಟುವಟಿಕೆಗಳಲ್ಲಿ ಶಾಮಿಲಾಗಿರುವುದು ರಹಸ್ಯ ತನಿಖೆಯಲ್ಲಿ ತಿಳಿದುಬಂದಿದೆ. ಆನ್‌ಲೈನ್ ವೇದಿಕೆಗಳಲ್ಲಿ ಜಿಹಾದಿ
ಪಿತೂರಿ ನಡೆಸಿದ್ದಾಗಿ ವಿಚಾರಣೆ ವೇಳೆ ಆಕೆ ಒಪ್ಪಿಕೊಂಡಿದ್ದಾಳೆ ಎAದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಶಮಾ ಪರ್ವೀನ್ ಆನ್‌ಲೈನ್ ಮೂಲಕ
ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವ ಬಗ್ಗೆ ತನಿಖೆಯ ಸಮಯದಲ್ಲಿ ಆಕೆಯಿಂದ ವಿವರವಾದ ಪುರಾವೆಗಳು ಮತ್ತು ಡಿಜಿಟಲ್
ಡೇಟಾವನ್ನು ವಶಪಡಿಸಿಕೊಳ್ಳಲಾಗಿದೆ. ಈಗ ಹೆಚ್ಚಿನ ಮಾಹಿತಿಯನ್ನು ಪಡೆಯಲು ಆಂತರಿಕ ವಿಚಾರಣೆಯನ್ನು ಪ್ರಾರಂಭಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದರು.

ಅಲ್ ಕೈದಾ ಜೊತೆ ನಂಟು ಹೊಂದಿರುವ ನಾಲ್ವರನ್ನು ಈ ಹಿಂದೆ ಗುಜರಾತ್ ಎಟಿಎಸ್ ಬಂಧಿಸಿತ್ತು. ಬಂಧಿತ ನಾಲ್ವರಲ್ಲಿ ಇಬ್ಬರು ಗುಜರಾತ್‌ನ ಅಹಮದಾಬಾದ್ ಮತ್ತು ಮೋಡಸಾದವರು. ಇನ್ನಿಬ್ಬರು ದೆಹಲಿ ಮತ್ತು ನೋಯ್ಡಾದವರು. ಈ ನಾಲ್ವರೂ ಅಲ್ ಖೈದಾ ಜತೆ ಸಂಪರ್ಕ ಹೊAದಿದ್ದರು. ಈ ಭಯೋತ್ಪಾದಕರು ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ವಿಷಯವನ್ನು ಹಂಚಿಕೊಳ್ಳುತ್ತಿದ್ದರು.
ಅವರು `ಘಜ್ವಾ-ಎ-ಹಿಂದ್’ ಬಗ್ಗೆ ವೀಡಿಯೊಗಳು ಮತ್ತು ಭಾಷಣಗಳ ಮೂಲಕ ಯುವಕರನ್ನು ಉಗ್ರವಾದಕ್ಕೆ ಬೆಂಬಲವನ್ನಾಗಿ ಮಾಡಲು ಪ್ರಯತ್ನಿಸಿದ್ದರು.

ಈ ನಾಲ್ವರ ವಿಚಾರಣೆ ವೇಳೆ ಬೆಂಗಳೂರನ್ನು ಕೇಂದ್ರವಾಗಿಸಿಕೊAಡು ಕಾರ್ಯಾಚರಿಸುತ್ತಿರುವ ಶಮಾ ಪರ್ವೀನ್ ಬಗ್ಗೆ ಮಾಹಿತಿ ದೊರೆತಿದೆ. ಶಂಕಿತ ಉಗ್ರರ ಬಂಧನದ ನAತರ ಚೋದನಕಾರಿ, ಜಿಹಾದಿ ವಿಡಿಯೋಗಳನ್ನು ಪ್ರಸಾರ ಮಾಡುವ ಐದು ಇನ್‌ಸ್ಟಾಗ್ರಾಮ್ ಖಾತೆಗಳ ಮೇಲೆ ಎಟಿಎಸ್ ಕಣ್ಣಿಟ್ಟಿತ್ತು. ಅವುಗಳನ್ನು ಒಬ್ಬನೇ ಆರೋಪಿ ನಿರ್ವಹಿಸುತ್ತಿರುವುದು ಗೊತ್ತಾಗಿತ್ತು. ಖಾತೆಯ ಮೂಲ ಪತ್ತೆಹಚ್ಚಿದ ನಂತರ, ಎಫ್‌ಎಸ್‌ಎಲ್ ಸೇರಿದಂತೆ ನಾಲ್ಕು ವಿಭಿನ್ನ ತಂಡಗಳನ್ನು ರಚಿಸಲಾಗಿತ್ತು. ನಂತರ ಎಟಿಎಸ್ ಅಧಿಕಾರಿಗಳು ಆರೋಪಿಗಳ ಬೆನ್ನತ್ತಿ ಬಂಧಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular