ಅಯೋಧ್ಯೆ : ರಾಮನವಮಿಯ ಪ್ರಯುಕ್ತ ಇದೇ ಮೊದಲ ಬಾರಿಗೆ ಸೂರ್ಯವಂಶಸ್ಥ ಶ್ರೀರಾಮನ ಹಣೆಯ ಮೇಲೆ ರಾಮ ಮಂದಿರದಲ್ಲಿಯೇ ಸೂರ್ಯತಿಲಕ ಇಡಲಾಗಿದೆ. ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಶ್ರೀರಾಮನವಮಿ ಸಂಭ್ರಮ ಮುಗಿಲು ಮುಟ್ಟಿದೆ. ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಬಳಿಕ ಮೊದಲ ರಾಮನವಮಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ,ಸೂರ್ಯ ವಂಶಜನಾಗಿದ್ದ ಶ್ರೀರಾಮ ಹುಟ್ಟಿದಾಗ, ಸೂರ್ಯ ಒಂದು ತಿಂಗಳು ಅಯೋಧ್ಯೆಯನ್ನು ಬಿಟ್ಟು ಹೋಗಿರಲಿಲ್ಲ ಎನ್ನುವ ಐತಿಹ್ಯವೂ ಇದೆ.ಅಂದಾಜು 4-5 ನಿಮಿಷಗಳ ಕಾಲ ಪ್ರಭು ಶ್ರೀರಾಮನ ಹಣೆಯ ಮೇಲೆ ಸೂರ್ಯತಿಲಕ ಮೂಡಿದೆ.ಈ ದೃಶ್ಯವನ್ನು ಶ್ರೀರಾಮಜನ್ಮಭೂಮಿ ಟ್ರಸ್ಟ್ ಪ್ರಸಾರ ಮಾಡಿದೆ.
ಸೂರ್ಯವಂಶದ ರಘುರಾಮನಿಗೆ ಸೂರ್ಯ ಭಗವಾನನಿಂದ ಅಭಿಷೇಕ ಮಾಡಲಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ರಾಮಲಲ್ಲಾನಿಗೆ ಸೂರ್ಯ ರಶ್ಮಿ ಸ್ಪರ್ಶ ಮಾಡಿದ್ದು, ಸುಮಾರು 70 ಮಿ.ಮೀ ಉದ್ದದ ತಿಲಕ ಹಣೆ ಮೇಲೆ ಮೂಡಿದೆ.ಶ್ರೀರಾಮನವಿಮಿಯಂದು ಬಾಲರಾಮನಿಗೆ ಸೂರ್ಯ ರಶ್ಮಿ ಸ್ಪರ್ಶವಾಗಿದೆ.ದೇವಾಲಯದ ಮೂರನೇ ಮಹಡಿಯಲ್ಲಿ ಅಳವಡಿಸಲಾಗಿರುವ ಮೊದಲ ಕನ್ನಡಿಯ ಮೇಲೆ ಸೂರ್ಯನ ಬೆಳಕು ಬೀಳಲಿದೆ. ಇಲ್ಲಿಂದ ಅದು ಪ್ರತಿಫಲನವಾಗಲಿದ್ದು, ಹಿತ್ತಾಳೆಯ ಪೈಪ್ ಅನ್ನು ಪ್ರವೇಶಿಸುತ್ತದೆ. ಹಿತ್ತಾಳೆ ಪೈಪ್‌ನಲ್ಲಿ ಅಳವಡಿಸಲಾದ ಎರಡನೇ ಕನ್ನಡಿಗೆ ತಾಕಿದ ನಂತರ, ಅವು ಮತ್ತೆ 90 ಡಿಗ್ರಿಗಳಲ್ಲಿ ಪ್ರತಿಫಲಿಸುತ್ತದೆ. ನಂತರ, ಹಿತ್ತಾಳೆಯ ಪೈಪ್ ಮೂಲಕ ಹೋಗುವಾಗ, ಈ ಕಿರಣವು ಮೂರು ವಿಭಿನ್ನ ಮಸೂರಗಳ ಮೂಲಕ ಹಾದುಹೋಗುತ್ತದೆ ಮತ್ತು ಉದ್ದವಾದ ಪೈಪ್‌ನ ಗರ್ಭಗುಡಿಯ ತುದಿಯಲ್ಲಿರುವ ಕನ್ನಡಿಗೆ ಹೊಡೆಯುತ್ತದೆ. ಗರ್ಭಗುಡಿಯಲ್ಲಿ ಅಳವಡಿಸಲಾಗಿರುವ ಗಾಜಿನ ಮೇಲೆ ಕಿರಣಗಳು ನೇರವಾಗಿ ರಾಮ್ ಲಲ್ಲಾನ ಹಣೆಯ ಮೇಲೆ 75 ಮಿಮೀ ವೃತ್ತಾಕಾರದ ತಿಲಕವನ್ನು ಇಡುತ್ತದೆ.
ಸೋಮವಾರದಂದು ರಾಮಲಲ್ಲಾ ವಿಗ್ರಹವನ್ನು ಬಿಳಿಯ ವಸ್ತ್ರದಲ್ಲಿ ಧರಿಸಲಾಗುತ್ತದೆ. ಮಂಗಳವಾರ ಗುಲಾಬಿ, ಬುಧವಾರ ಹಸಿರು, ಗುರುವಾರ ಹಳದಿ, ಶುಕ್ರವಾರ ಕೆನೆ, ಶನಿವಾರ ನೀಲಿ ಮತ್ತು ಭಾನುವಾರ ಕೆಂಪು ಬಣ್ಣದ ವಸ್ತ್ರವನ್ನು ಹಾಕಲಾಗುತ್ತದೆ.ದೇವಸ್ಥಾನದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್, ರಾಮಲಲ್ಲಾಗೆ ವಿವಿಧ ದಿನಗಳ ಪ್ರಕಾರ ವಿವಿಧ ಬಣ್ಣದ ಬಟ್ಟೆಗಳನ್ನು ನಿಗದಿಪಡಿಸಲಾಗಿದೆ ಎಂದು ಹೇಳುತ್ತಾರೆ.ಚೈತ್ರ ಮಾಸ ಶುಕ್ಲ ಪಕ್ಷದ ನವಮಿಯಂದು ಬಾಲ ರಾಮನಿಗೆ ಸೂರ್ಯ ರಶ್ಮಿ ಸ್ಪರ್ಶಿಸಿದೆ. ರಾಮಲಲ್ಲಾನಿಗೆ ಸುಮಾರು ಮೂರರಿಂದ ಮೂರುವರೆ ನಿಮಿಷ ಸೂರ್ಯನ ಕಿರಣಗಳು ಸ್ಪರ್ಶಿಸಿದ್ದು, 2 ನಿಮಿಷಗಳ ಕಾಲ ಸಂಪೂರ್ಣ ತಿಲಕ ಗೋಚರಿಸಿದೆ. ಈ ಅದ್ಭುತ ದೃಶ್ಯವನ್ನು ಅಯೋಧ್ಯೆಯಲ್ಲಿ ಭಕ್ತರು ಕಣ್ತುಂಬಿಕೊಂಡಿದ್ದಾರೆ.