ಅಮರಾವತಿ : ರಂಗನರೆಡ್ಡಿ ಜಿಲ್ಲೆಯ ಚೆವೆಲ್ಲಾ ಮಂಡಲದ ದಮರಗಿದ್ದದಲ್ಲಿ ದುರಂತ ಸಂಭವಿಸಿದೆ. ಕಾರಿನಲ್ಲಿ ಆಟವಾಡುತ್ತಿದ್ದ ಇಬ್ಬರು ಮಕ್ಕಳು ಬಾಗಿಲು ಲಾಕ್ ಆದ ಕಾರಣ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಚೆವೆಲ್ಲಾ ಮಂಡಲದ ಪಮನಾ ಗ್ರಾಮದ ವೆಂಕಟೇಶ್ ಜ್ಯೋತಿ ದಂಪತಿಗಳ ಪುತ್ರಿ ತನ್ಮಯ ಶ್ರೀ (5) ಮತ್ತು ಶಾಬಾದ್ ಮಂಡಲದ ಸೀತಾರಾAಪುರ ಗ್ರಾಮದ ಮಹೇಂದರ್ ಉಮರಾಣಿ ದಂಪತಿಗಳ ಪುತ್ರಿ ಅಭಿನಯ್ ಶ್ರೀ (4) ದುರಂತಕ್ಕೀಡಾದ ಮಕ್ಕಳು.ಈ ತಿಂಗಳ ೩೦ ರಂದು ಅವರ ಚಿಕ್ಕಪ್ಪನ ಮದುವೆ ನಡೆಯಲಿದ್ದ ಅಜ್ಜಿಯ ಮನೆಯಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.ಮಕ್ಕಳು ಮನೆಯ ಮುಂದೆ ನಿಲ್ಲಿಸಿದ್ದ ಕಾರಿನೊಳಗೆ ಆಟವಾಡಲು ಹೋಗಿದ್ದಾರೆ.ಆದರೆ, ಕಾರಿನ ಬಾಗಿಲುಗಳು ಲಾಕ್ ಆಗಿದ್ದರಿಂದ ಮತ್ತು ಯಾರೂ ಮಕ್ಕಳನ್ನು ಗಮನಿಸದ ಕಾರಣ ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಮಕ್ಕಳು ಬಹಳ ಹೊತ್ತಿನಿಂದ ಕಾಣಿಸಿದ ಕಾರಣ ಕುಟುಂಬ ಸದಸ್ಯರು ಹತ್ತಿರದಲ್ಲಿ ಎಲ್ಲಾ ಸ್ಥಳದಲ್ಲೂ ಮಕ್ಕಳನ್ನು ಹುಡುಕಿದ್ದಾರೆ. ಕೊನೆಗೆ, ಕಾರಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಕ್ಕಳು ಬಿದ್ದಿರುವುದನ್ನು ಕಂಡ ಅವರು ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಆದರೆ ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ ಈ ಘಟನೆಯಿಂದಾಗಿ ಇಡೀ ಹಳ್ಳಿಯೇ ಮಮ್ಮಲ ಮರುಗಿದೆ.ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.