ಅಮರಾವತಿ : ಗೂಗಲ್ ಎಐ ಜತೆ ಆಂಧ್ರ ಪ್ರದೇಶ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಕರ್ನಾಟಕ ಹಾಗೂ ನಾಯ್ಡು ಸರ್ಕಾರದ ನಡುವಿನ ಐಟಿ ಫೈಟ್ ಮತ್ತಷ್ಟು ಜೋರಾಗಿದೆ.
ಗೂಗಲ್ ಜತೆಗಿನ ಒಪ್ಪಂದವನ್ನು ಪ್ರಶ್ನಿಸಿದ ಕರ್ನಾಟಕ ನಾಯಖರ ವಿರುದ್ಧ ಬಹಿರಂಗವಾಗೇ ಹರಿಹಾಯ್ದಿರುವ ಆಂಧ್ರಪ್ರದೇಶ ಐಟಿ ಸಚಿವ ನಾರಾ ಲೋಕೇಶ್, `ಕರ್ನಾಟಕದ ಕೈಗಾರಿಕೋದ್ಯಮಿಗಳೇ ಅವರ ರಾಜ್ಯದಲ್ಲಿ ಮೂಲಸೌಕರ್ಯ ವ್ಯವಸ್ಥೆ ಅತ್ಯಂತ ಕೆಟ್ಟದಾಗಿದೆ, ಜತೆಗೆ ವಿದ್ಯುತ್ ಕೂಡ ಕೈ ಕೊಡುತ್ತಿರುತ್ತದೆ ಎಂದು ಹೇಳುತ್ತಾರೆ.
ಅಲ್ಲಿನ ನಾಯಕರು ಮೊದಲು ಈ ಸಮಸ್ಯೆಗಳನ್ನು ಸರಿಪಡಿಸಬೇಕು ಎಂದು ಹೇಳಿದ್ದಾರೆ. ಕೈಗಾರಿಕೋದ್ಯಮಕ್ಕೆ ಸಂಬAಧಿಸಿ ದಂತೆ ನಮ್ಮ ದೃಷ್ಟಿ ಸ್ಪಷ್ಟವಾಗಿದೆ. ನಮ್ಮದು ಸರ್ವ ರೀತಿಯಿಂದಲೂ ಸಾಮರ್ಥ್ಯ ಹೊಂದಿರುವ ಡಬಲ್ ಎಂಜಿನ್ ಸರ್ಕಾರ. ಹೀಗಿರುವಾಗ ಸಹಜವಾಗೇಕೈಗಾರಿಕೋದ್ಯಮಿಗಳು ನಮ್ಮ ಕಡೆ ಆಕರ್ಷಿತರಾಗುತ್ತಾರೆ. ಅವರು (ಕರ್ನಾಟಕಸರ್ಕಾರ) ಸಾಮರ್ಥ್ಯಹೀನರಾಗಿದ್ದರೆ ನಾನೇನು ಮಾಡಲಾಗುತ್ತದೆ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. ನಾನಿಲ್ಲಿ ಟ್ವಿಟರ್ ಯುದ್ಧ ಮಾಡಲು ಇಲ್ಲ. ರಾಜ್ಯಗಳು ಒಂದರ ಮೇಲೋಂದು ಸ್ಪರ್ಧೆ ಮಾಡಿದಾಗ ಭಾರತ ಗೆಲ್ಲುತ್ತೆ ಎಂದರು.
ಕೈಗಾರಿಕೆಗಳಿಗೆ ನಾವು ಪ್ರೋತ್ಸಾಹ ಕೊಡುತ್ತೇವೆ ಕಂಪನಿಗಳನ್ನು ಸೆಳೆಯಲು ಕರ್ನಾಟಕದವರು ಅಸಮರ್ಥರಾಗಿದ್ದರೆ ನಾನೇನೂ ಮಾಡಲು ಸಾಧ್ಯವಿಲ್ಲ. ನಾವು ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುತ್ತೇವೆ. ವಿಶಾಖಪಟ್ಟಣದಲ್ಲಿ ಗೂಗಲ್ ಕೇಂದ್ರ ತೆರೆಯಲು ನಾವು ಹಲವಾರು ಸಭೆಗಳನ್ನು ನಡೆಸಿದ್ದೇವೆ. ಏನೇನು ಸಮಸ್ಯೆಯಾಗಿತ್ತು ಅವುಗಳನ್ನು ನಾವು ಪರಿಹರಿಸಿಕೊಟ್ಟಿದ್ದೇವೆ ಎಂದು ಆAಧ್ರ ಐಟಿ ಸಚಿವ ನಾರಾ ಲೋಕೇಶ್ ಹೇಳಿದ್ದಾರೆ.