ಅಫಜಲಪುರ : ತಾಲೂಕಿನ ಸುತ್ತಮುತ್ತ ಶನಿವಾರ ರಾತ್ರಿ ಗುಡುಗು ಸಿಡಿಲು ಸಹಿತ ಸುರಿದ ಭಾರಿ ಬಿರುಗಾಳಿಯೊಂದಿಗೆ ಆರ್ಭಟಿಸಿದ ಮಳೆ ತಾಲೂಕಿನ ಬಳೂರ್ಗಿ ಗ್ರಾಮದಲ್ಲಿ ಬಾಳೆ ತೋಟ ನೆಲಸಮ ಮಾಡಿದೆ.
ಗ್ರಾಮದ ಮಹ್ಮದ ರಫಿ ಗೌರ್ಕರ್ ಅವರ ತೋಟದಲ್ಲಿ ಸುಮಾರು ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ತೋಟ ಸಂಪೂರ್ಣವಾಗಿ ನಾಶವಾಗಿದೆ. ಶೇಕಡಾ.90ರಷ್ಟು ಗಿಡಗಳಲ್ಲಿ ಗೊನೆಗಳು ಬಂದಿದ್ದು, ಒಂದೆರಡು ತಿಂಗಳಲ್ಲಿ ಬಾಳೆ ಫಸಲು ಕೊಯ್ಲಿಗೆ ಬರುತ್ತಿತ್ತು.ಕಷ್ಟು ಪಟ್ಟು ಬೇರೆವರಿಂದ ಕೈಗಡ ಸಾಲ ಪಡೆದು ಸುಮಾರು 3 ಲಕ್ಷ ರೂಪಾಯಿ ಬಂಡವಾಳ ಹಾಕಿ ಟ್ಯಾಂಕರ ಮೂಲಕ ನೀರು ಹಾಕಿ ಬಾಳೆ ಬೆಳೆಯಲಾಗಿತ್ತು. ಆದರೆ ಶನಿವಾರ ಸಂಜೆ ಬಂದ ಬಿರುಗಾಳಿ ಮಳೆಗೆ ಸಂಪೂರ್ಣವಾಗಿ ಬಾಳೆ ನೆಲಕಚ್ಚಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಹಾನಿಯಾದ ಬೆಳೆಗೆ ಸರಕಾರ ಪರಿಹಾರ ನೀಡಬೇಕು ಎಂದು ರೈತ ಮಹ್ಮದ್ ರಫಿ ಗೌರ್ಕರ್ ಅವರು ತಮ್ಮ ನೋವು ತೋಡಿಕೊಂಡಿದ್ದಾರೆ.


