Thursday, December 12, 2024
Flats for sale
Homeಕ್ರೀಡೆಅಡಿಲೇಡ್ : ಆಸ್ಟ್ರೇಲಿಯಾಕ್ಕೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಹತ್ತು ವಿಕೆಟ್‌ಗಳ ಭರ್ಜರಿ ಜಯ..!

ಅಡಿಲೇಡ್ : ಆಸ್ಟ್ರೇಲಿಯಾಕ್ಕೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಹತ್ತು ವಿಕೆಟ್‌ಗಳ ಭರ್ಜರಿ ಜಯ..!

ಅಡಿಲೇಡ್ : ಭಾರತದ ಬ್ಯಾಟರ್‌ಗಳೆದುರು ‘ಶಾರ್ಟ್ ಪಿಚ್’ ಎಸೆತಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿದ ನಾಯಕ ಪ್ಯಾಟ್ ಕಮಿನ್ಸ್ ಪ್ರವಾಸಿಗರ ಎರಡನೇ ಸರದಿಯಲ್ಲಿ ಐದು ವಿಕೆಟ್ ಎತ್ತುವುದರೊಂದಿಗೆ ಆಸ್ಟ್ರೇಲಿಯಾಕ್ಕೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಹತ್ತು ವಿಕೆಟ್‌ಗಳ ಭರ್ಜರಿ ಜಯ ತಂದಿಡುವಲ್ಲಿ
ಪ್ರಮುಖ ಪಾತ್ರ ವಹಿಸಿದರು.

ಇದರೊಂದಿಗೆ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಸೀಸ್ ತಂಡ 1-1ರ ಸಮಸ್ಥಿತಿಗೆ ತಂದುಕೊAಡಿದೆ. ಎರಡೂ ತಂಡಗಳ ನಡುವಿನ ಬ್ರಿಸ್ಬೇನ್‌ನ ‘ದಿ ಗಬ್ಬಾ’ ಟೆಸ್ಟ್ ದಿನಾಂಕ 14 ರಂದು ಪ್ರಾರAಭವಾಗಲಿದೆ.

ಐದು ವಿಕೆಟ್‌ಗಳಿಗೆ 128 ರ ಎರಡನೇ ದಿನದ ಸ್ಕೋರಿನಿಂದ ಆಟ ಮುಂದುವರಿಸಿದ ಭಾರತ ಭಾನುವಾರ ಆ ಮೊತ್ತಕ್ಕೆ ಕೇವಲ 47 ಓಟಗಳನ್ನು ಸೇರಿಸುವಲ್ಲಿ ಮಾತ್ರ ಯಶ ಕಂಡು 36.5 ಓವರ್‌ಗಳಲ್ಲಿ 175ಕ್ಕೆ ಸರ್ವಪತನ ಕಂಡಿತು. ಭಾರತದ ಪರ ಮತ್ತೊಮ್ಮೆ ಏಕಾಂಗಿಯಾಗಿ ಹೋರಾಡಿದ ನಿತಿಶ್‌ಕುಮಾರ ರೆಡ್ಡಿ 47 ಎಸೆತಗಳಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಇದ್ದ 42 ಓಟ ಸಿಡಿಸಿ ಪ್ರವಾಸಿಗರ ಪೈಕಿ ಅತ್ಯಧಿಕ ಸ್ಕೋರರ್ ಎನಿಸಿಕೊಂಡರು.

ಅಲ್ಪ ತರದ ಎಸೆತಗಳೆದುರು ರೋಹಿತ್ ಪಡೆಯ ದೌರ್ಬಲ್ಯದ ಸಂಪೂರ್ಣ ಲಾಭವೆತ್ತಿದ ಕಮಿನ್ಸ್ ಟೆಸ್ಟ್ ಪಂದ್ಯಗಳಲ್ಲಿ ಭಾರತದ ಎದುರು ಎರಡನೇ ‘ಫೈಫರ್’ ದಾಖಲಿಸಿದರು. ಆಸೀಸ್ ನಾಯಕ ತಮ್ಮ 14 ಓವರ್‌ಗಳಲ್ಲಿ 57 ಓಟಗಳನ್ನಿತ್ತು ಐದು ವಿಕೆಟ್ ಎತ್ತುವುದರೊಂದಿಗೆ ಆತಿಥೇಯರಿಗೆ ಎರಡನೇ ಟೆಸ್ಟ್ ಗೆಲ್ಲಲು ಬೇಕಿದ್ದ ಓಟಗಳ ಸಂಖ್ಯೆ ಕೇವಲ ೧೯ಕ್ಕೆ ಸೀಮಿತಗೊಂಡಿತು. ಇನ್ನಿಬ್ಬರು ವೇಗಿಗಳಾದ ಸ್ಕಾಟ್ ಬೋಲಾಂಡ್(3/51) ಹಾಗೂ ಮಿಚೆಲ್ ಸ್ಟಾರ್ಕ್(2/60) ಕಮಿನ್ಸ್ಗೆ ಸಮರ್ಥ ಬೆಂಬಲ ನೀಡಿದರು.

ಆಸ್ಟೆçÃಲಿಯದ ಪ್ರಾರಂಭಿಕ ಬ್ಯಾಟರ್‌ಗಳಾದ ನಾಥನ್ ಮ್ಯಾಕ್‌ಸ್ವೀನಿ (ಔಟಾಗದೇ 10, 12 ಎಸೆತ, 2 ಬೌಂಡರಿ) ಹಾಗೂ ಉಸ್ಮಾನ್ ಖವಾಜಾ(ಔಟಾಗದೇ 9, 8 ಎಸೆತ, 1 ಬೌಂಡರಿ) 3.2 ಓವರ್‌ಗಳಲ್ಲಿ ತಂಡದ ಗೆಲುವಿಗೆ ಬೇಕಿದ್ದ ಓಟಗಳನ್ನು ಕೂಡಿಸಿಕೊಟ್ಟರು.

ಪರ್ಥ್ನಲ್ಲಿ ಮೊದಲ ಟೆಸ್ಟಿನಲ್ಲಿ 295 ಓಟಗಳ ಸೋಲಿನ ಭಾರಿ ಮುಖಭಂಗ ಅನುಭವಿಸಿದ್ದ ಆಸೀಸ್ ಪಡೆ ಅದ್ಭುತವಾಗಿ ಚೇತರಿಸಿಕೊಂಡು ಪ್ರವಾಸಿಗರಿಗೆ ತಿರುಗೇಟು ನೀಡಿದೆ. ಈ ಗೆಲುವಿನ ನಂತರ ಆಸ್ಟೆçÃಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ಸ್ ಪಾಯಿAಟ್ ಪಟ್ಟಿಯ ಅಗ್ರಸ್ಥಾನಕ್ಕೇರಿದ್ದು, ಭಾರತ ಮೂರನೇ ಸ್ಥಾನಕ್ಕೆ ಕುಸಿದಿದೆ. ಇದರೊಂದಿಗೆ ಸತತ ಮೂರನೇ ಸಲವೂ ಫೈನಲ್‌ನಲ್ಲಾಡುವ ಅದರ ಮಹದಾಸೆಯ ಮೇಲೆ ಕಾರ್ಮೋಡ
ಕವಿದಿದೆ.

ಆರಂಭದಲ್ಲೇ ಆಘಾತ ಸಮಸ್ಯೆಯ ಸುಳಿಯಿಂದ ಹೊರಬರುವ ಭಾರತದ ಪ್ರಯತ್ನಕ್ಕೆ ಪಂದ್ಯದ ಕೇವಲ ಮೂರನೇ ದಿನವಾದ ಭಾನುವಾರದ ಆರಂಭದಲ್ಲೇ ಕೊಡಲಿಯೇಟು ಬಿತ್ತು. ಸ್ಟಾರ್ಕ್ರಿಂದ ಆಫ್ ಸ್ಟಂಪ್ ಮೇಲೆ ಬಿದ್ದು ಹೊರ ನಡೆದಿದ್ದ ಚೆಂಡು ರಿಷಭ್ ಪಂತ್(28, 31 ಎಸೆತ, 5 ಬೌಂಡರಿ) ಬ್ಯಾಟಿನ ಹೊರ ತುದಿಗೆ ಸವರಿ ಎರಡನೇ ಸ್ಲಿಪ್‌ನಲ್ಲಿದ್ದ ಸ್ಟೀವನ್ ಸ್ಮಿತ್ ಕೈಸೇರಿತು. ಇದರ ಬೆನ್ನ ಹಿಂದೆಯೇ ರವಿಚಂದ್ರನ್ ಅಶ್ವಿನ್(7, 14 ಎಸೆತ) ಎದುರು ಪ್ಯಾಟ್ ಕಮಿನ್ಸ್ರ ‘ಶಾರ್ಟ್ ಪಿಚ್’ ಎಸೆತಗಳ ಬಳಕೆ ಫಲ ನೀಡಿತು. ಅಂತಹ ಸತತ ಮೂರು ಎಸೆತಗಳನ್ನು ‘ಹುಕ್’ ಮಾಡುವ ಪ್ರಯತ್ನದಲ್ಲಿ ಅಶ್ವಿನ್ ತಪ್ಪಿದರಾದರೂ, ನಂತರದ್ದು ಅವರ ಬ್ಯಾಟಿಂಗ್ ‘ಗ್ಲೋವ್’ಗೆ ಸವರಿಕೊಂಡು ವಿಕೆಟ್ ಹಿಂದಿದ್ದ ಅಲೆಕ್ಸ್ ಕ್ಯಾರಿ ಕೈಸೇರಿತು.

ಅಶ್ವಿನ್ ವಿಕೆಟ್ ಪಡೆದ ಕಮಿನ್ಸ್ ಹರ್ಷಿತ್ ರಾಣಾ(0, 12 ಎಸೆತ) ಅವರಿಗೂ ‘ಖೆಡ್ಡಾ’ ತೋಡಿದರೆಂದರೆ ತಪ್ಪಾಗಲಿಕ್ಕಿಲ್ಲ. ಎಗರಿದ ಚೆಂಡೊAದರಲ್ಲಿ ರಾಣಾ ‘ಗಲ್ಲಿ’ಯಲ್ಲಿದ್ದ ಖವಾಜಾ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು.

ಇನ್ನೊಂದು ತುದಿಯಲ್ಲಿ ಏಕಾಂಗಿಯಾಗಿ ಹೋರಾಡುತ್ತಿದ್ದ ರೆಡ್ಡಿ, ಮೊದಲು ಸ್ಕಾಟ್ ಬೋಲಾಂಡ್‌ರನ್ನು ಲಾಂಗ್-ಆನ್ ಬೌAಡರಿಗೆ ಬಾರಿಸಿದರು. ನಂತರ ಕಮಿನ್ಸ್ ಅವರ ಬೌನ್ಸರ್ ಒಂದನ್ನು ಬ್ಯಾಕ್‌ವರ್ಡ್ ಸ್ಕೆ÷್ವÃರ್‌ಲೆಗ್‌ಗೆ ‘ಹುಕ್’ ಮಾಡಿ ಸಿಕ್ಸರ್ ಸಿಡಿಸಿ ಭಾರತವನ್ನು ಇನ್ನಿಂಗ್ಸ್ ಸೋಲಿನಿಂದ ಪಾರು ಮಾಡಿದರು.

ಆದರೆ ಅಂತಿಮ ನಗು ರೆಡ್ಡಿ ಅವರನ್ನು ‘ಥರ್ಡ್ ಮ್ಯಾನ್’ನಲ್ಲಿ ಬಲಿ ಹಾಕಿದ ಕಮಿನ್ಸ್ ಅವರದಾಯಿತು. ಬೋಲಂಡ್ ಬೌಲಿಂಗಿನಲ್ಲಿ ಮೊಹಮ್ಮದ್ ಸಿರಾಜ್(7, 8 ಎಸೆತ, 1 ಬೌಂಡರಿ) ಅವರು ನೀಡಿದ ಕ್ಯಾಚನ್ನು ಮಿಡ್‌ವಿಕೆಟ್‌ನಲ್ಲಿ ಬಿದ್ದು ಉತ್ಕೃಷ್ಟವಾಗಿ ಹಿಡಿದ ‘ಪಂದ್ಯದ ಆಟಗಾರ’ ಟ್ರಾವಿಸ್ ಹೆಡ್ ಭಾರತದ ಎರಡನೇ ಸರದಿಗೆ ಮಂಗಳ ಹಾಡಿದರು.

ಸಂಕ್ಷಿಪ್ತ ಸ್ಕೋರುಗಳು: ಭಾರತ: 44.1 ಓವರ್‌ಗಳಲ್ಲಿ 180 ಹಾಗೂ 36.5 ಓವರ್‌ಗಳಲ್ಲಿ175(ನಿತಿಶ್‌ಕುಮಾರ ರೆಡ್ಡಿ 42, ರಿಷಭ್ ಪಂತ 28, ಶುಭ್ಮನ್ ಗಿಲ್ ೨೮, ಯಶಸ್ವಿ ಜೈಸ್ವಾಲ್ 24, ಪ್ಯಾಟ್ ಕಮಿನ್ಸ್ 5-57, ಸ್ಕಾಟ್ ಬೋಲಾಂಡ್ 3-51, ಮಿಚೆಲ್ ಸ್ಟಾರ್ಕ್ 2-60),

ಆಸ್ಟೆçÃಲಿಯಾ: 87.3ಓವರ್‌ಗಳಲ್ಲಿ 337 ಹಾಗೂ 3.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 19. ಫಲಿತಾಂಶ: ಆಸ್ಟೆçÃಲಿಯಾಕ್ಕೆ 10೦ ವಿಕೆಟ್ ಗೆಲುವು. ಪಂದ್ಯದ ಆಟಗಾರ: ಟ್ರಾವಿಸ್ ಹೆಡ್(ಆಸ್ಟೆçÃಲಿಯಾ).

RELATED ARTICLES

LEAVE A REPLY

Please enter your comment!
Please enter your name here

Most Popular