ನವದೆಹಲಿ : ಅಕ್ರಮವಾಗಿ ವಾಸವಾಗಿದ್ದ104 ಮಂದಿ ಭಾರತೀಯರನ್ನು ಸ್ವದೇಶಕ್ಕೆ ವಾಪಸ್ ಕಳುಹಿಸುವ ಮೂಲಕ ಅಮೆರಿಕ ಗಡಿಪಾರು ಮಾಡಿರುವ ವಿಚಾರ ಇಂದು ಸಂಸತ್‌ನ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ ಕಲಾಪ ಭೋಜನ ವಿರಾಮದವರೆಗೂ ಮುಂದೂಡಿದ ಪ್ರಸAಗ ನಡೆಯಿತು.
ಲೋಕಸಭೆಯಲ್ಲಿಂದು ಕಲಾಪ ಆರಂಭವಾಗುತ್ತಿದ್ದಂತೆ ಭಾರತೀಯರನ್ನು ಗಡಿಪಾರು ಮಾಡಿರುವ ವಿಚಾರ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಘೋಷಣೆ ಕೂಗುತ್ತ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಭಾರತೀಯರನ್ನು ಗಡಿಪಾರು ಮಾಡಿರುವ ಬಗ್ಗೆ ಸರ್ಕಾರ ಉತ್ತರ ನೀಡಬೇಕು. ಈ ಸಂಬAಧ ನಿಲುವಳಿ ಸೂಚನೆ ಮಂಡಿಸಿದ್ದು, ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಈ ಮಧ್ಯ ಪ್ರವೇಶಿಸಿದ ಲೋಕಸಭಾಧ್ಯಕ್ಷ ಓಂಬಿರ್ಲಾ, ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕೆಂದು ಮಾಡಿದ ಮನವಿಗೆ ಪ್ರತಿಪಕ್ಷಗಳ ಸದಸ್ಯರು ಸ್ಪಂದಿಸಲಿಲ್ಲ. ಈ ವಿಚಾರ ಬೇರೊಂದು ದೇಶಕ್ಕೆ ಸಂಬAಧಿಸಿದ್ದಾಗಿದೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲಿದೆ. ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಆದರೆ, ವಿಪಕ್ಷಗಳು ಗದ್ದಲ ಕೋಲಾಹದ ಘೋಷಣೆ
ಕೂಗಿ ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ಮಧ್ಯಾಹ್ನ ೨ ಗಂಟೆವರೆಗೆ ಮುಂದೂಡಿದರು.
ಇತ್ತ ರಾಜ್ಯಸಭೆಯಲ್ಲೂ ಪರಿಸ್ಥಿತಿಯೇನು ಭಿನ್ನವಾಗಿರಲಿಲ್ಲ. ಕಾಂಗ್ರೆಸ್, ಸಿಪಿಐ, ಟಿಎಂಸಿ, ಎಎಪಿ ಮತ್ತು ಸಿಪಿಎಂ ಪಕ್ಷಗಳು ಅಕ್ರಮ ವಲಸಿಗರನ್ನು ಅಮೆರಿಕ ಗಡಿಪಾರು ಮಾಡಿ ಭಾರತಕ್ಕೆ ರವಾನಿಸಿರುವ ವಿಷಯದ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದವು. ಸಭಾಪತಿ ಜಗದೀಪ್ ಧನ್ಕರ್ ಚರ್ಚೆಗೆ ಅವಕಾಶ ನಿರಾಕರಿಸಿದ್ದರಿಂದ ಪ್ರತಿಪಕ್ಷಗಳು ತಮ್ಮ ಪಟ್ಟನ್ನು ಸಡಿಲಿಸಲಿಲ್ಲ ಇದರಿಂದ ಕಲಾಪ ಮುಂದೂಡುವAತಾಯಿತು.
ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ಟ್ರಂಪ್ 2ನೇ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವುದಾಗಿ ಹೇಳಿದ್ದರು. ಇದರ ಪ್ರಕ್ರಿಯೆಯ ಭಾಗವಾಗಿ ಮಿಲಿಟರಿ ವಿಮಾನದಲ್ಲಿ 104 ಮಂದಿ ಭಾರತೀಯರನ್ನು ಟ್ರಂಪ್ ಆಡಳಿತ ಭಾರತಕ್ಕೆ ರವಾನಿಸಿದೆ.
ಅಕ್ರಮ ವಲಸಿಗರನ್ನೊಳಗೊಂಡ ತAಡ ನಿನ್ನೆ ಭಾರತಕ್ಕೆ ಆಗಮಿಸಿದೆ. ಇದು ಸಂಸತ್‌ನ ಬಜೆಟ್ ಅಧಿವೇಶನದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಈ ಮಧ್ಯೆ ಪ್ರತಿಪಕ್ಷಗಳು 104 ಮಂದಿ ಭಾರತೀಯ ಪ್ರಜೆಗಳನ್ನು ಗಡಿಪಾರು ಮಾಡಿ ಭಾರತಕ್ಕೆ ವಾಪಸ್ ಕಳುಹಿಸಿರುವ ಕ್ರಮ ಖಂಡಿಸಿ ಸಂಸತ್ತಿನ ಹೊರಗಡೆ ಪ್ರತಿಪಕ್ಷಗಳು ಪ್ರತಿಭಟನೆ \ ನಡೆಸಿದವು.
ಇದೇ ವೇಳೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನಾಯಕ ಶಶಿತರೂರ್, ಅಕ್ರಮ ವಲಸಿಗರನ್ನು ಸೇನಾ ವಿಮಾನದಲ್ಲಿ ಅಮೆರಿಕ ಕಳುಹಿಸಿಕೊಟ್ಟಿದೆ. ಅವರ ಕೈಗಳಿಗೆ ಬೇಡಿ ತೊಡಿಸಿ ಭಾರತೀಯರಿಗೆ ಅಗೌರವ ನೀಡಿ, ಭಾರತೀಯರ ಗೌರವಕ್ಕೆ ಧಕ್ಕೆಯುಂಟು ಮಾಡಿದೆ ಎಂದು ಆರೋಪಿಸಿದರು.