ಹೈದ್ರಾಬಾದ್ : ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಶನಿವಾರ ಇಲ್ಲಿ ನಡೆದ ಐಪಿಎಲ್‌ನ 27 ನೇ ಲೀಗ್ಸ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ತಂಡ
ಎಂಟು ವಿಕೆಟ್ ಭರ್ಜರಿ ಜಯ ಸಾಧಿಸಿದರೂ ಆ ತಂಡದ ಮೊಹಮ್ಮದ್ ಶಮಿ ಐಪಿಎಲ್ ಇತಿಹಾಸದಲ್ಲಿ ಎರಡನೇ ದುಬಾರಿ ಬೌಲರ್ ಎನಿಸಿದರು.
ಅನುಭವಿ ವೇಗದ ಬೌಲರ್ ಮೊಹಮ್ಮದ ಶಮಿ 4 ಓವರ್ ಬೌಲಿಂಗ್ ಮಾಡಿ ಯಾವುದೇ ವಿಕೆಟ್ ಪಡೆಯದೇ 75 ರನ್ ನೀಡಿ ಐಪಿಎಲ್ ಇತಿಹಾಸದಲ್ಲಿ ಎರಡನೆ ಅತಿ ದುಬಾರಿ ಬೌಲರ್ ಎನಿಸಿದರು. ಇಂಗ್ಲೆಂಡ್ ನ ಜೋಫ್ರಾ ಆರ್ಚರ್, ಐಪಿಎಲ್‌ನಲ್ಲಿ ಗರಿಷ್ಠ ರನ್ ನೀಡಿದ ಬೌಲರ್ ಎನಿಸಿದ್ದಾರೆ. ಪ್ರಸಕ್ತಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುತ್ತಿರುವ ಅವರು, ಸನ್‌ರೈಸರ್ಸ್ ಹೈದ್ರಾಬಾದ್ ತಂಡದ ವಿರುದ್ಧದ ಪಂದ್ಯದಲ್ಲಿ ಆರ್ಚರ್ 4 ಓವರ್‌ಗಳಲ್ಲಿ 76 ರನ್ ನೀಡಿದ್ದು, ಐಪಿಎಲ್‌ನಲ್ಲಿ ಒಂದು ದಾಖಲೆ ಎನಿಸಿದೆ. 75 ರನ್ ನೀಡಿದ ಮೊಹಮ್ಮದ್ ಶಮಿ ಎರಡನೇ ಸ್ಥಾನದಲ್ಲಿದ್ದರೆ,73ರನ್ ನೀಡಿದ ಗುಜರಾತ್ ತಂಡದ ಮೋಹಿತ್ ಶರ್ಮಾ ಇದ್ದಾರೆ.