ಹೈದರಾಬಾದ್ : ಹೈದರಾಬಾದ್‌ನ ಸೋಮಜಿಗುಡನಲ್ಲಿ 81 ವರ್ಷದ ನಿವೃತ್ತ ಉದ್ಯಮಿಗೆ ಮುಂಬೈ ಪೊಲೀಸರ ಸೋಗಿನಲ್ಲಿ ಕರೆ ಮಾಡಿದ್ದ ವಂಚ ಕರು ಡ್ರಗ್ಸ್ ಕಳ್ಳ ಸಾಗಾಣೆ ಜಾಲದಲ್ಲಿ ಭಾಗಿಯಾಗಿರುವದಾಗಿ ಬೆದ ರಿಸಿ ಬರೋಬ್ಬರಿ 7.12 ಕೋಟಿ ರೂ. ವಂಚಿಸಿದ್ದಾರೆ.
ದೂರಿನ ಪ್ರಕಾರ, ಅಕ್ಟೋಬರ್ ೨೭ರಂದು ಸಂತ್ರಸ್ತನಿಗೆ ಬ್ಲೂಡಾರ್ಟ್ ಕೋರಿಯನ್ ಕಂಪನಿ ಯಿಂದ ಸುನೀಸ್ ಶರ್ಮಾ ಎಂಬ ಹೆಸರಿನಲ್ಲಿ ವಾಟ್ಸಾö್ಯಪ್ ಕರೆ ಮಾಡಿ ತಮ್ಮ ಹೆಸರಿನಲ್ಲಿ ಮುಂಬೈನಿAದ ಬ್ಯಾಂಕಾಕ್‌ಗೆ ಪಾರ್ಸಲ್ ಕಳುಹಿಸ ಲಾಗಿದೆ. ಅದರಲ್ಲಿ ಐದು ಪಾಸ್‌ಪೋರ್ಟ್, ಲ್ಯಾಪ್ ಟಾಪ್ ಹಾಗೂ ೨೦೦ ಗ್ರಾಮ್ ಮಾದಕದ್ರವ್ಯ ಪತ್ತೆಯಾಗಿದೆ. ಪ್ರಕರಣವನ್ನು ಮುಂಬೈ ಪೊಲೀಸರಿಗೆಅಧಿಕಾರಿಗಳು ವರ್ಗಾಯಿಸಿದ್ದಾರೆ ಎಂದು ಬೆದರಿಸಿದ್ದಾರೆ.
ಇದಾದ ಕೆಲವೇ ಕ್ಷಣದಲ್ಲಿ ಮತ್ತೊಬ್ಬ ಮುಂಬೈ ಪೊಲೀಸರ ಸೋಗಿನಲ್ಲಿ ಕರೆ ಮಾಡಿ ನೀವು ಮಾದಕದ್ರವ್ಯ ಕಳ್ಳಸಾಗಾಣೆ, ಹಣ ಅಕ್ರಮ ವರ್ಗಾಣೆಮತ್ತು ಭಯೋತ್ಪಾದನೆಯಲ್ಲಿ ತೊಡಗಿದ್ದೀರಿ ಎಂದುಹೆದರಿಸಿದ್ದಾರೆ. ಈ ಬೆನ್ನಲ್ಲೇ ವೃದ್ಧ ಭಯಭೀತರಾಗಿ ಈ ವಿಷಯವನ್ನು ಕುಟುಂಬಸ್ಥರಿಗೆ, ಸ್ನೇಹಿತರಿಗೆತಿಳಿಸದಂತೆ ಬೇಡಿಕೊಂಡಿದ್ದಾರೆ. ಇದನ್ನೇ ಬಂಡವಾಳವನ್ನಾಗಿಸಿಕೊAಡ ವಂಚಕರು,ಸಹಕರಿಸದಿದ್ದರೆ ಕ್ರಮಕೈಗೊಳ್ಳುವುದಾಗಿ ಬೆದರಿಸಿ ವೃದ್ಧನ ಬ್ಯಾಂಕ್ ಖಾತೆಯಿಂದ ಆರು ಬಾರಿ
ಒಟ್ಟು 7.12,80,೦೦೦ರೂ. ಹಣ ವರ್ಗಾವಣೆಮಾಡಿಸಿಕೊಂಡಿದ್ದಾರೆ. ಈ ಬೆನ್ನಲ್ಲೇ 81 ವರ್ಷದ ವೃದ್ಧ ತೆಲಂಗಾಣದ ಪೊಲೀಸರಿಗೆ ದೂರು ನೀಡಿದ್ದು ತನಿಖೆ ನಡೆಸಲಾಗುತ್ತಿದೆ


