ಹುಬ್ಬಳ್ಳಿ : ವಿಶ್ವ ಮಾನವ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಅಂಜಲಿ ಕೊಲೆ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಅಂಜಲಿ ಹತ್ಯೆ ಮಾಡಿದ ಆರೋಪಿ ಗಿರೀಶ್ ನನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಕಳೆದ 6 ತಿಂಗಳುಗಳಿಂದ ಮೈಸೂರಿನ ಬಾರ್ ಮತ್ತು ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ವಿಶ್ವನ ಬಳಿ ಮೊಬೈಲ್ ಫೋನ್ ಇರದಿದ್ದ ಕಾರಣ ಅವನನ್ನು ಪತ್ತೆ ಮಾಡುವುದು ಪೊಲೀಸರಿಗೆ ಒಂದು ಸವಾಲಾಗಿತ್ತು. ಪೊಲೀಸರ 8 ತಂಡಗಳನ್ನು ರಚಿಸಿ ಆರೋಪಿಯನ್ನು ಪತ್ತೆ ಮಾಡುವ ಕೆಲಸಕ್ಕೆ ಇಳಿಸಲಾಗಿತ್ತು. ಆರೋಪಿ ದಾವಣಗೆರೆಯಲ್ಲಿರುವ ಬಗ್ಗೆ ಅಲ್ಲಿನ ರೇಲ್ವೇ ಪೊಲೀಸರಿಂದ ಮಾಹಿತಿ ಲಭ್ಯವಾಗಿತ್ತು.ಕೊನೆಗೂ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಹುಬ್ಬಳಿಗೆ ಬಂದು ಅಂಜಲಿಗೆ ಚಾಕು ಇರಿದ ಆರೋಪಿ ವಿಶ್ವ ಮಾನವ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ. ಆರೋಪಿ ರೈಲಿನಲ್ಲಿ ಕುಳಿತಿದ್ದ ಮಹಿಳೆಗೆ ಚಾಕು ಇರಿಯಲು ಯತ್ನಿಸಿದ್ದಾನೆ. ಎದುರಿನ ಸೀಟ್ನಲ್ಲಿದ್ದ ಮಹಿಳೆಗೆ ಚಾರು ಇರಿದಿದ್ದರಿಂದ ಗದಗ ಮೂಲದ ಲಕ್ಷ್ಮೀ ಕೈಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಮಹಿಳೆಗೆ ಚಾಕು ಇರಿಯಲು ಯತ್ನಿಸಿದ ಬಳಿಕ ಗಿರೀಶ್ ಸಾವಂತ್ ಭಯಗೊಂಡು ಟ್ರೇನ್ನಿಂದ ಕೆಳಗೆ ಜಿಗಿದಿದ್ದಾನೆ. ಸಾಸಲು-ಮಾಯಕೊಂಡ ಮಾರ್ಗ ಮಧ್ಯೆ ಬಿದ್ದಿದ್ದ ಆರೋಪಿ ಗಿರೀಶ್ ಅನ್ನು ಸ್ಥಳೀಯರು ದಾವಣಗೆರೆ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ.
ಇನ್ನು ಆರೋಪಿ ಗಿರೀಶ್ ನನ್ನು ದಾವಣಗೆರೆ ಪೊಲೀಸರು ಹುಬ್ಬಳಿಗೆ ಕರೆತಂದಿದ್ದು ಕೊಲೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ .ಇತ್ತೀಚಿಗೆ ಹದಿಹರೆಯದ ಯುವಕರು ಅಮಾಯಕರ ಪ್ರಾಣಕ್ಕೆ ಕುತ್ತು ತರುವಂತಹ ಪ್ರಕರಣ ಹೆಚ್ಚಾಗುತ್ತಿದ್ದು ಹೆಣ್ಣು ಹೆತ್ತ ಪೋಷಕರಿಗೆ ಭಯದ ವಾತಾವರಣ ಶುರುವಾಗಿದೆ. ಕೇವಲ ಪ್ರೀತಿಗಾಗಿ ಅಮಾಯಕ ಹೆಣ್ಣು ಮಕ್ಕಳನ್ನು ಹತ್ಯೆಮಾಡುವುದು ಶೋಕಿಯಾಗಿದ್ದು ಈ ಬಗ್ಗೆ ಸರಕಾರ ಇಂಹತವರನ್ನು ಪತ್ತೆಹಚ್ಚಿ ಕಠೀಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳ ಮಾತು .