ಹುಬ್ಬಳ್ಳಿ : ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಹಿಂದಿನ ದಿನ, 1992 ಡಿ. 5 ರ ರಾತ್ರಿ ನಡೆದಿದ್ದ ಕೋಮು ಗಲಭೆಯಲ್ಲಿ ಹಿಂದೂ ಕಾರ್ಯಕರ್ತರು ಹುಬ್ಬಳ್ಳಿ ಶಹರ ಠಾಣಾ ವ್ಯಾಪ್ತಿಯ ಮಳಿಗೆಯೊಂದಕ್ಕೆ ಬೆಂಕಿ ಹಚ್ಚಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 31 ವರ್ಷಗಳ ಬಳಿಕ ಆರೋಪಿಯೊಬ್ಬನನ್ನು ಬಂಧಿಸಿರುವುದು ಪೊಲೀಸ್ ಇಲಾಖೆಯ ನೈತಿಕತೆ ಪ್ರಶ್ನಿಸುವಂತೆ ಮಾಡಿದೆ.
ಇದೇ ಗಲಭೆಗೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿ ರಾಮಚಂದ್ರ ಕಲಬುರ್ಗಿ ಅವರ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ. ಅವರನ್ನು ಬಂಧಿಸುವ ಉದ್ದೇಶದಿಂದಲೇ ಮನೆಗೆ ತೆರಳಿದ್ದ ಪೊಲೀಸರ ಕೈಗೆ ಸಿಗದೇ ರಾಮಚಂದ್ರ ಪರಾರಿಯಾಗಿದ್ದರು. ರಾಮಚಂದ್ರ ಅವರು ಬುಧವಾರ ಹುಬ್ಬಳ್ಳಿಯ ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆ ಇದೆ.
ಜಾಮೀನಿಗೆ ದಾಖಲೆಗಳ ಅಡ್ಡಿ ಗಲಭೆ ಪ್ರಕರಣದಲ್ಲಿ ಬಂಧಿತ ಆರೋಪಿ ಶ್ರೀಕಾಂತ ಪೂಜಾರಿ ಅವರಿಗೆ ಸಂಬAಧಿಸಿದAತೆ ಶಹರ ಠಾಣೆಯಲ್ಲಾಗಲಿ, ನ್ಯಾಯಾಲಯದಲ್ಲಾಗಲಿ ಸೂಕ್ತ ದಾಖಲೆಗಳು ಇಲ್ಲವಂತೆ. ಹೀಗಾಗಿ ಮಂಗಳವಾರ ಜಾಮೀನಿಗೆ ಅರ್ಜಿ ಹಾಕಲು ಅಡ್ಡಿ ಉಂಟಾಗಿದೆ. ಸದ್ಯ ಲಭ್ಯವಿರುವ ದಾಖಲಾತಿಗಳ ಆಧಾರದ ಮೇಲೆ ಬುಧವಾರ ಜಾಮೀನು ಅರ್ಜಿ ಸಲ್ಲಿಸಲಾಗುವುದು ಎಂದು ಆರೋಪಿ ಪರ ವಕೀಲ ಸಂಜಯ ಬಡಸ್ಕರ್ ತಿಳಿಸಿದ್ದಾರೆ. ರೌಡಿಶೀಟ್ ಕ್ಲೋಸ್ ಬಂಧಿತ ಶ್ರೀಕಾಂತ ಪೂಜಾರಿ ಅವರ ಮೇಲೆ ಗಲಭೆ ಪ್ರಕರಣ ಹೊರತುಪಡಿಸಿ, ಬೇರೆ ಬೇರೆ ಪ್ರಕರಣಗಳೂ ದಾಖಲಾಗಿದ್ದವು.
ಈ ಸಂಬAಧ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಇವರ ಮೇಲೆ ರೌಡಿಶೀಟ್ ತೆರೆಯಲಾಗಿತ್ತು. ಅಲ್ಲಿಂದ ಯಾವುದೇ ಗಲಾಟೆ, ಜಗಳ ಸೇರಿದಂತೆ ಗಂಭೀರ ಪ್ರಕರಣಗಳಲ್ಲಿ ಶ್ರೀಕಾಂತ ಭಾಗಿಯಾಗದ ಕಾರಣ ಮತ್ತು ವಯೋಕಾರಣದಿಂದ ಅವರ ಮೇಲೆ ಹಾಕಿದ್ದ ರೌಡಿ ಶೀಟ್‌ಅನ್ನು ಇತ್ತೀಚೆಗೆ ತೆಗೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
1992 ರಿಂದ 1996ರ ವರೆಗೆ ಹುಬ್ಬಳ್ಳಿಯಲ್ಲಿ ನಡೆದಿದ್ದ ಕೋಮುಗಲಭೆ ಪ್ರಕರಣಗಳಿಗೆ ಸಂಬAಧಿಸಿದAತೆ 300 ಆರೋಪಿಗಳ ಪಟ್ಟಿ ತಯಾರಿಸಲಾಗಿತ್ತು . ಈ ಪೈಕಿ ರಾಜು ಧರ್ಮದಾಸ, ಶ್ರೀಕಾಂತ ಪೂಜಾರಿ, ಅಶೋಕ ಕಲಬುರಗಿ, ಷಣ್ಮುಖ ಕಾಟಿಗಾರ, ಗುರುನಾಥಸಾ ಕಾಟಿಗಾರ, ರಾಮಚಂದ್ರಸಾ ಕಲಬುರಗಿ ಹಾಗೂ ಅಮೃತ ಕಲಬುರಗಿ ಸೇರಿ13 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು ಈ ಸಂಬಂಧ ಹಿಂದೆಯೇ ೮ ಜನರನ್ನು ಬಂಧಿಸಿದ್ದು, ಐವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು ಮೂವರು ಮೃತಪಟ್ಟಿದ್ದು ಇದೀಗ
ಶ್ರೀಕಾಂತ ಪೂಜಾರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.


