ಹಾಸನ : ಅಧಿದೇವತೆ ಹಾಸನಾಂಬ ವಾರ್ಷಿಕ ದರ್ಶನದ ಕಾಣಿಕೆ ಹುಂಡಿಯಲ್ಲಿ 8 ಕೋಟಿಗೂ ಅಧಿಕ ಹಣ ಸಂಗ್ರಹವಾಗಿ ದಾಖಲೆ ನಿರ್ಮಿಸಿದೆ. ಕಳೆದ ವರ್ಷ 3 ಕೋಟಿ 26 ಲಕ್ಷ ರೂ. ಆದಾಯ ಬಂದಿತ್ತು.
ಭಕ್ತರಿAದ ಟಿಕೆಟ್, ಲಾಡು ಮಾರಾಟ, ಸ್ಕಾö್ಯನ್ ಮೂಲಕ ಹಣ ಹಾಕುವುದು, ಕಾಣಿಕೆ ಹುಂಡಿಯಿAದ 8,72,41,531 ರೂ. ಸಂಗ್ರಹವಾಗಿದೆ. ಹಾಸನಾAಬೆ ಮತ್ತು ಶ್ರೀ ಸಿದ್ದೇಶ್ವರ ದೇವಾಲಯದ ಮುಂಭಾಗದ ಆವರಣದಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ನಡೆಯಿತು.
ಒಟ್ಟು21 ಕಾಣಿಕೆ ಹುಂಡಿಗಳು ಇದ್ದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಎಣಿಕೆ ಕಾರ್ಯದಲ್ಲಿತ್ತು ,ಎಲ್ಲ ಕಡೆ ಸಿಸಿ ಕ್ಯಾಮೆರಾ ಕಣ್ಗಾವಲು ಇದ್ದು ಮುಜರಾಯಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಚಿನ್ನ, ಬೆಳ್ಳಿ ಸಂಗ್ರಹ: ಕಾಣಿಕೆ ಹುಂಡಿಗೆ ಭಕ್ತರಿಂದ ಹರಕೆ ರೂಪದಲ್ಲಿ 69ಗ್ರಾಂ ಚಿನ್ನ, 161 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ನಾಣ್ಯಗಳು ಹಾಗೂ ನೋಟುಗಳನ್ನು ವಿಂಗಡಿಸಿ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಲೆಕ್ಕ ಮಾಡಿದರು. ವಿದೇಶಿ ಕರೆನ್ಸಿಗಳು ಕಾಣಿಕೆ ಹುಂಡಿಯಲಿ ಇರುವುದು ಪತ್ತೆಯಾಗಿದೆ.
ಅಡಕೆ ಕಾಣಿಕೆ: ಹರಕೆಯ ರೂಪದಲ್ಲಿ ಸುಲಿಯದ ಅಡಕೆಯೂ ಕಂಡುಬAದಿದೆ. ಜೊತೆಗೆ ದವಸಧಾನ್ಯ ಕೂಡ ಬಂದಿದೆ ಎಂದು ಹಾಸನ ಉಪವಿಭಾಗಧಿಕಾರಿ ಮಾರುತಿ ಗೌಡ ಅವರು ಹಾಸನಾಂಬ ದೇಗುಲದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆಯಿತು. ಹೇಳಿದರು
ಹಾಸನಾಂಬೆ ದರ್ಶನ ಮಾಡಲು ಬಂದ ಅನೇಕರು ವಿವಿಧ ರೀತಿಯ ಕೋರಿಕೆ ಪತ್ರವನ್ನು ಕಾಣಿಕೆ ಹುಂಡಿಗೆ ಹಾಕುತ್ತಿದ್ದರು. ಅದನ್ನು ಬಹಿರಂಗಪಡಿಸಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದಲೂ ಕೋರಿಕೆ ಪತ್ರವನ್ನು ಕಟ್ಟುನಿಟ್ಟಿನ ಸೂಚನೆ ನೀಡಿದಂತೆ ಬಹಿರAಗಪಡಿಸಲಿಲ್ಲ. ಭಕ್ತರ ಮನವಿಗಳು ಗುಪ್ತವಾಗಿಯೇ ಉಳಿದಿತ್ತು.


