ಹಾಸನ : ಮೊನ್ನೆ ತಾನೇ ಸಕಲೇಶಪುರ ತಾಲೂಕಿನ ದೋಣಿಗಲ್, ಎಡಕುಮೇರಿ ನಡುವೆ ಭೂಕುಸಿತ ಸಂಭವಿಸಿತ್ತು. ಈ ಸಂದರ್ಭದಲ್ಲೂ ಬೆಂಗಳೂರು-ಮಂಗಳೂರು ಮಧ್ಯೆ 10 ದಿನಗಳ ಕಾಲ ರೈಲು ಸಂಚಾರ ರದ್ದಾಗಿತ್ತು. ಇದೀಗ ಮತ್ತೊಮ್ಮೆ ಸಕಲೇಶಪುರ ತಾಲೂಕಿನ ದೋಣಿಗಲ್, ಎಡಕುಮೇರಿ ನಡುವೆ ಭೂಕುಸಿತ ಸಂಭವಿಸಿತ್ತು. ಈ ಸಂದರ್ಭದಲ್ಲೂ ಬೆಂಗಳೂರು-ಮಂಗಳೂರು ಮಧ್ಯೆ ರೈಲು ಸಂಚಾರ ರದ್ದಾಗಿತ್ತು. ಹಾಸನ ಜಿಲ್ಲೆಯ ಸಕಲೇಶಪುರ-ಬಾಳ್ಳುಪೇಟೆ ನಡುವೆ ರೈಲು ಹಳಿಗಳ ಮೇಲೆ ಗುಡ್ಡ ಕುಸಿದಿದೆ. ಹಾಸನ-ಮಂಗಳೂರು ನಡುವಿನ ಕಿಲೋಮೀಟರ್ ಸಂಖ್ಯೆ 42/43 ರ ಮಧ್ಯೆ ಭೂ ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯರಾತ್ರಿಯಿಂದ ರೈಲುಗಳ ಸಂಚಾರ ಬಂದ್ ಆಗಿದೆ. ರೈಲ್ವೆ ಇಲಾಖೆ ಕಾರ್ಮಿಕರು ಮಣ್ಣು ತೆರವು ಮಾಡುತ್ತಿದ್ದಾರೆ.
ಕಳೆದ ವಾರ ಸುರಿದ ಬಾರಿ ಮಳೆಗೆ ಮಣ್ಣು ಸಡಿಲಗೊಂಡಿದ್ದು ಈ ಕುಸಿತಕ್ಕೆ ಕಾರಣವಾಗಿರಬಹುದೆಂದು ಅಧಿಕಾರಿಗಳ ಮಾತು. ಸಕಲೇಶಪುರ, ಯಡಕುಮಾರಿ, ಶಿರಿಬಾಗಿಲು, ಆಲೂರು ಸೇರಿ ಒಟ್ಟು ಆರು ಕಡೆ ರೈಲು ಸಂಚಾರ ನಿಂತಿದೆ. ರೈಲುಗಳು ದಿಢೀರ್ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡಿದರು. ಸಾವಿರಾರು ಪ್ರಯಾಣಿಕರು ಬೆಳಗಿನ ಜಾವದವರೆಗೆ ರೈಲಿನಲ್ಲೇ ಕಳೆದರು. ಬೆಳಗ್ಗೆ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ವಾಹನಗಳ ವ್ಯವಸ್ಥೆ ಮಾಡಿದ್ದಾರೆ.


