ಹಾಸನ ; ಹಾಸನ ಜಿಲ್ಲೆಯ ಹಾಲೂರು ತಾಲೂಕಿನ ಹೆಮ್ಮೆಗೆ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆ ಸಂಚರಿಸುವ ದೃಶ್ಯ ಸಿಸಿ ಟಿವಿಯಲ್ಲಿ ಕಾಣಿಸಿಕೊಂಡಿದೆ.
ಹೆಮ್ಮಿಗೆ ಗ್ರಾಮದ ಜೀವನ್ ಎಂಬುವವರ ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಕಾಡಾನೆ ಹಾದು ಹೋಗುವ ದೃಶ್ಯ ಸೆರೆಯಾಗಿದೆ. ಇದರಿಂದ ಎಮ್ಮಿಗೆ ಗ್ರಾಮದ ಸುತ್ತಮುತ್ತಲ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಕೂದಲೆಳೆ ಅಂತರದಲ್ಲಿ ಕೆ ಎಸ್ ಆರ್ ಟಿ ಸಿ ಚಾಲಕ ಮತ್ತು ನಿರ್ವಾಹಕ ಪಾರಾಗಿದ್ದಾರೆ.ಹೆಮ್ಮಿಗೆ ಗ್ರಾಮದಲ್ಲಿ ಸಂಚಾರ ಮಾಡಿದ ಕಾಡಾನೆ ಶಾರ್ಪ್ ಶೂಟರ್ ವೆಂಕಟೇಶ್ ಅವರನ್ನು ಬಲಿ ಪಡೆದ ಭೀಮ ಇರಬಹುದೇ? ಎಂಬ ಅನುಮಾನ ಮೂಡಿದೆ.
ಎಮ್ಮಿಗೆ ಗ್ರಾಮದ ಸುತ್ತಮುತ್ತ ಕಳೆದ ಒಂದು ವಾರದಿಂದಲೂ 13ಕ್ಕೂ ಹೆಚ್ಚು ಆನೆಗಳು ಬಿಡು ಬಿಟ್ಟಿದ್ದು ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.ಹಲವು ದಿನಗಳಿಂದ ಕಾಫಿ ಅಡಿಕೆ ಮತ್ತು ಭತ್ತದ ಗದ್ದೆ ಹಾಗೂ ಇತರೆ ಬೆಳೆಗಳನ್ನು ನಾಶ ಕಾಡಾನೆಗಳ ಹಿಂಡು ನಾಶಮಾಡಿದೆ .
ಕಾಫಿ ತೋಟ ಜೋಳದ ವಲ ಇತರೆ ಜಮೀನುಗಳಲ್ಲಿ ಕೆಲಸ ಮಾಡುವ ಕಾರ್ಮಿಕರು,, ರೈತರು,, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಸಾರ್ವಜನಿಕರು, ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಜೀವನ್ ಮನವಿ ಮಾಡಿದ್ದಾರೆ.


