Friday, March 13, 2026
Flats for sale
Homeಕ್ರೈಂಹಾಸನ : ಕಬ್ಬಿಣದ ಸರಪಳಿಯಲ್ಲಿ ಬಂಧಿಸಲ್ಪಟ್ಟಿದ್ದ ಮಾನಸಿಕ ಅಸ್ವಸ್ಥ ಬಾಲಕನ ರಕ್ಷಣೆ.

ಹಾಸನ : ಕಬ್ಬಿಣದ ಸರಪಳಿಯಲ್ಲಿ ಬಂಧಿಸಲ್ಪಟ್ಟಿದ್ದ ಮಾನಸಿಕ ಅಸ್ವಸ್ಥ ಬಾಲಕನ ರಕ್ಷಣೆ.

ಹಾಸನ : ಅಸ್ಸಾಂನ ಕುಟುಂಬವೊಂದು ತಮ್ಮ ಮಾನಸಿಕ ಅಸ್ವಸ್ಥ ಮಗುವನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿ, ಆತನ ಕಾಲುಗಳನ್ನು ಸರಪಳಿಯಿಂದ ಕಟ್ಟಿ ಹಾಕಿರುವ ಘಟನೆ ವರದಿಯಾಗಿದ್ದು ಸಕಲೇಶಪುರ ತಾಲೂಕಿನ ಕ್ಯಾನಳ್ಳಿ ಬಳಿ ರಸ್ತೆ ಬದಿ ಬಾಲಕ ಪತ್ತೆಯಾಗಿದ್ದಾನೆ.

ಬುಧವಾರ ಕೊಠಡಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಬಾಲಕ ರಸ್ತೆಬದಿಯಲ್ಲಿ ನಿಂತಾಗ ಘಟನೆ ಬೆಳಕಿಗೆ ಬಂದಿದ್ದು,ದಾರಿಹೋಕರು ಈತನನ್ನು ಮಾತನಾಡಿಸಿದರೂ ಮೌನವಾಗಿದ್ದಾನೆ. ಎದ್ದು ನಿಲ್ಲು ಎಂದು ಬಲವಂತದಿAದ ಒತ್ತಾಯಿಸಿದಾಗ ಎದ್ದು ನಿಂತ ಬಾಲಕನ ಸೊಂಟಕ್ಕೆ ಕಬ್ಬಿಣದ ಸರಪಳಿ ಬಿಗಿದಿದ್ದು ಕಂಡುಬAತು. ಸರಪಳಿಯ ಕೊನೆಯನ್ನು ಎಡಗಾಲಿನ ಪಾದದವರೆಗೂ ತಂದು ಬಿಗಿಯಲಾಗಿದೆ. ಆತನಿಗೆ ಓಡಲು ಸಾಧ್ಯವಾಗದಿರಲಿ ಎಂದು ಹಾಗೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಈ ಬಾಲಕ ಸ್ಫುರದ್ರೂಪಿಯಾಗಿದ್ದು ಮಾಹಿತಿ ಮೇರೆಗೆ ಸಕಲೇಶಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಲಕನನ್ನು ರಕ್ಷಿಸಿದ್ದಾರೆ. ಉಮೇಶ್ ಎಂಬುವರಿಗೆ ಸೇರಿದ ಕಾಫಿ ಎಸ್ಟೇಟ್‌ನಲ್ಲಿ ಅಸ್ಸಾಂ ಮೂಲದ ದಂಪತಿ ಕಳೆದೆರಡು ತಿಂಗಳಿಂದ ಕೆಲಸ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.ಈತ ಮೂಕನಾಗಿರುವ ಸಾಧ್ಯತೆಯೂ ಇದ್ದು, ಎಲ್ಲೂ ಓಡಿಹೋಗದಿರಲಿ ಎಂದು ಈ ರೀತಿ ಸರಪಳಿ ಬಿಗಿದಿದ್ದಾರೆ ಎಂದು ತಿಳಿದುಬಂದಿದೆ.

ಕಾಫಿ ಎಸ್ಟೇಟ್ ಮಾಲೀಕ ಉಮೇಶ್ ಹಲವು ಬಾರಿ ಎಚ್ಚರಿಕೆ ನೀಡಿದರೂ ದಂಪತಿ ಕೈ ಕಾಲು ಸರಪಳಿಯಲ್ಲಿ ಕಟ್ಟಿ ಹಾಕುವ ಅಭ್ಯಾಸ ಮುಂದುವರಿಸಿದ್ದರು ಎನ್ನಲಾಗಿದ್ದು,ದಂಪತಿ ತಮ್ಮ ದಿನನಿತ್ಯದ ಕೆಲಸಕ್ಕೆ ಹೊರಡುವ ಮುನ್ನ ಹುಡುಗನನ್ನು ಸರಪಳಿಯಲ್ಲಿ ಕಟ್ಟಿಹಾಕಿ ಅವನಿಗೆ ಆಹಾರ ನೀಡಿದ ನಂತರ ಕೊಠಡಿಯಲ್ಲಿ ಕೂಡಿ ಹಾಕುತ್ತಿದ್ದರು.

ಸ್ಥಳಕ್ಕೆ ಆಗಮಿಸಿದ ಹಾಸನದ ಶಿಶುಪಾಲನಾ ಮತ್ತು ರಕ್ಷಣಾ ಕೇಂದ್ರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅಧಿಕಾರಿಗಳು ಅಪ್ರಾಪ್ತ ಬಾಲಕನನ್ನು ವೈದ್ಯಕೀಯ ಪರೀಕ್ಷೆಗಾಗಿ ಕ್ರೌಫೋರ್ಡ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ . ಸದ್ಯ ಆತನನ್ನು ಹಾಸನದ ಶಿಶುಪಾಲನಾ ಮತ್ತು ರಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದ್ದು ದಂಪತಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular