ಹಾವೇರಿ : ಕೊಟ್ಟ ಸಾಲ ಮರುಪಾವತಿಸದಕ್ಕೆ ಫೈನಾನ್ಸ್ ಸಿಬ್ಬಂದಿಗಳು ಮನೆಗೆ ಬೀಗ ಹಾಕಿ ಹಣ ಪಡೆದ ಕುಟುಂಬವನ್ನು ಹೊರಗೆ ಹಾಕಿದ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹಿಲದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಈಕ್ವಿಟಾಸ್ ಫೈನಾನ್ಸ್ ನಲ್ಲಿ ವಿಳ್ಯದೆಲಿ ಬಳ್ಳಿ ತೋಟಕ್ಕಾಗಿ ಸೋಮಲಿಂಗಪ್ಪ ಉಳಜ್ಜೆರ್ ಕುಟುಂಬ ಸುಮಾರು 7 ಲಕ್ಷಕ್ಕೂ ಅಧಿಕ ಸಾಲಪಡೆದಿದ್ದು ಬೆಳೆಯಲ್ಲಿ ನಷ್ಟ ಉಂಟಾದ ಕಾರಣ ಸಾಲ ತೀರಿಸದೆ ಕಂಗಲಾಗಿದ್ದರು. ಈ ಹಿನ್ನೆಲೆ ಫೈನಾನ್ಸ್ ಸಿಬ್ಬಂದಿಗಳು ಕೋರ್ಟ್ ಆದೇಶ ಹಿಡಿದುಕೊಂಡು ಕ್ರಮ ತೆಗೆದುಕೊಂಡಿದ್ದಾರೆ.
ಸಮಯ ಕೊಟ್ಟರೆ ನಾನು ಪಡೆದ ಸಾಲ ತಿರೀಸುತ್ತೇನೆ ಎಂದು ಫೈನಾನ್ಸ್ ಸಿಬ್ಬಂದಿ ಬಳಿ ಸೋಮಲಿಂಗಪ್ಪ ಕುಟುಂಬಸ್ಥರು ಅಂಗಲಾಚಿದ್ದು ಊಟ,ನಿದ್ರೆ ಇಲ್ಲದೆ ರಾತ್ರಿಯೀಡಿ ಪರದಾಡಿದ್ದಾರೆ .ಸೂರಿಲ್ಲದೆ ರಾತ್ರಿಯೀಡಿ ಮನೆಯ ಮುಂದೆ ಚಳಿಯಲ್ಲಿ ಕುಟುಂಬದವರು ಬೆಳ್ಳಿಯ ಚಂದ್ರಗುತ್ತೆಮ್ಮ ದೇವರ ಮೂರ್ತಿಯೊಂದಿಗೆ ಮಲಗಿದ್ದಾರೆ. ರಾಣೇಬೆನ್ನೂರು ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಬಡಜನರ ಕೂಗು ಕೇಳದಂತಾಗಿದೆ.


