Friday, March 13, 2026
Flats for sale
Homeರಾಜ್ಯಹಾವೇರಿ : ಮಗ ಹೃದಯಾಘಾತದಿಂದ ಮೃತಪಟ್ಟ ಸುದ್ದಿ ಕೇಳಿ ತಂದೆಯೂ ಹೃದಯಾಘಾತಕ್ಕೆ ಬಲಿ..!

ಹಾವೇರಿ : ಮಗ ಹೃದಯಾಘಾತದಿಂದ ಮೃತಪಟ್ಟ ಸುದ್ದಿ ಕೇಳಿ ತಂದೆಯೂ ಹೃದಯಾಘಾತಕ್ಕೆ ಬಲಿ..!

ಹಾವೇರಿ : ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಯುವಕರು ಬಲಿಯಾಗುತ್ತಿರುವುದು ಅತಿಹೆಚ್ಚು ಕಂಡುಬರುತ್ತಿದ್ದು ಇದಕ್ಕೆ ಕೊರೊನ ಔಷದಿಯ ಅಡ್ಡ ಪರಿಣಾಮ ಎಂದು ಇತ್ತೀಚ್ಚಿಗೆ ತಿಳಿದ ವಿಚಾರ ಆದರೆ ಮಗ ಹೃದಯಾಘಾತದಿಂದ ಸಾವಾಗಿರುವ ಸುದ್ದಿ ಕೇಳಿ, ತಂದೆಯೂ ಹೃದಯಾಘಾತದಿಂದ ಮೃತಪಟ್ಟಿರುವ ಹೃದಯಾವಿದ್ರಾವಕ ಘಟನೆ ಹಾವೇರಿ ಜಿಲ್ಲೆಯ ಬಸವೇಶ್ವರ ನಗರದಲ್ಲಿ ನಡೆದಿದೆ.

ವೃತ್ತಿಯಲ್ಲಿ ಇಬ್ಬರು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು ಮೃತ ಮಗನನ್ನು ಡಾ. ವಿನಯ್ ಗುಂಡಗಾವಿ (38) ಹಾಗೂ ಮೃತ ತಂದೆಯನ್ನು ಡಾ. ವೀರಭದ್ರಪ್ಪ ಗುಂಡಗಾವಿ (68) ಎಂದು ತಿಳಿದುಬಂದಿದೆ.

ತಂದೆ ಡಾ.ವೀರಭದ್ರಪ್ಪ ಹಾವೇರಿಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ವಿನಯ ಹುಬ್ಬಳ್ಳಿಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದರು.ತಂದೆ ಮತ್ತು ಮಗ ಯಾವಾಗಲೂ ಅತ್ಯಂತ ಪ್ರೀತಿಯಿಂದಲೆ ಇರುತ್ತಿದ್ದರು. ಹೀಗಾಗಿ ಮಗ ಡಾ.ವಿನಯನ ಸಾವಿನ ಸುದ್ದಿ ಕೇಳಿದ ತಂದೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಮಗನ ಸಾವಿನ ಸುದ್ದಿ ಕೇಳಿದ ತಂದೆ ಡಾ.ವೀರಭದ್ರಪ್ಪ ಗುಂಡಗಾವಿಗೆ ಹಾವೇರಿಯಲ್ಲಿ ಹೃದಯಾಘಾತವಾಗಿದೆ. ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು ಮನಕುಲಕುವಂತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular