ಹಾವೇರಿ ; ಬೀದಿ ನಾಯಿಗಳಿಗೆ ತುತ್ತಾಗುತ್ತಿದ್ದ ಸಾರಂಗ ರಕ್ಷಣೆ ಮಾಡಿ ಚಿಕಿತ್ಸೆ ನಂತರ ಸುರಕ್ಷಿತವಾಗಿ ಇಲಾಖೆಯ ಸಹಾಯದಿಂದ ಅರಣ್ಯ ಪ್ರದೇಶಕ್ಕೆ ಗ್ರಾಮಸ್ಥರು ಬಿಟ್ಟ ಘಟನೆ ಹಾವೇರಿ ಜಿಲ್ಲೆಯ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಮುಂಡಗೋಡ ಹಾಗೂ ಹಾನಗಲ್ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದ ತಾಲೂಕಿನ ರಾಮತೀರ್ಥ ಹೊಸಕೊಪ್ಪ ಗ್ರಾಮದಲ್ಲಿ ಸಾರಂಗ ಕಾಣಿಸಿಕೊಂಡಿದ್ದು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ನೀರನ್ನು ಅರಸಿ ಗ್ರಾಮಕ್ಕೆ ಬಂದ ಚಿಕ್ಕೆ ಸಾರಂಗವನ್ನು ನಾಯಿಗಳು ಬೇಟೆಯಾಡಿ ಗಾಯಗೊಳಿಸಿತ್ತು. ಗಾಯಗೊಂಡ ಸಾರಂಗ ವನ್ನು ಗ್ರಾಮಸ್ಥರು ನಾಯಿಗಳಿಂದ ರಕ್ಷಣೆ ಮಾಡಿ ಪ್ರಾಥಮಿಕ ಚಿಕಿತ್ಸೆ ನಂತರ ಅರಣ್ಯ ಇಲಾಖೆ ಸಹಾಯದಿಂದ ಸುರಕ್ಷಿತವಾಗಿ ಕಾಡಗೆ ಕಳುಹಿಸಿ ಪ್ರಾಣ ಉಳಿಸಿದ್ದಾರೆ.


