Wednesday, December 3, 2025
Flats for sale
Homeರಾಜ್ಯಹಾವೇರಿ : ಜಿಲ್ಲಾಸ್ಪತ್ರೆಯಲ್ಲಿ ಶೌಚಾಲಯಕ್ಕೆ ಹೋಗುವ ದಾರಿಯಲ್ಲೇ ಮಹಿಳೆಗೆ ಹೆರಿಗೆ,ವೈದ್ಯರ ನಿರ್ಲಕ್ಷ್ಯದಿಂದ ಬೆಡ್ ಸಿಗದೆ ಕೆಳಗಡೆ...

ಹಾವೇರಿ : ಜಿಲ್ಲಾಸ್ಪತ್ರೆಯಲ್ಲಿ ಶೌಚಾಲಯಕ್ಕೆ ಹೋಗುವ ದಾರಿಯಲ್ಲೇ ಮಹಿಳೆಗೆ ಹೆರಿಗೆ,ವೈದ್ಯರ ನಿರ್ಲಕ್ಷ್ಯದಿಂದ ಬೆಡ್ ಸಿಗದೆ ಕೆಳಗಡೆ ಬಿದ್ದು ಮಗು ಸಾವು!

ಹಾವೇರಿ : ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶುವೊಂದು ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದ್ದು, ಹೆರಿಗೆಗೆ ಬಂದ ಮಹಿಳೆಯನ್ನು ಒಂದು ತಾಸು ನೆಲದ ಮೇಲೆ ಕೂರಿಸಿ ನೀರ್ಲಕ್ಷ್ಯ ತೋರಿದ ಆರೋಪ ಆಸ್ಪತ್ರೆಯ ವೈದ್ಯರು, ನರ್ಸ್ಗಳ ಮೇಲೆ ಕೇಳಿಬಂದಿದೆ.

ಆಸ್ಪತ್ರೆಯ ಶೌಚಾಲಯಕ್ಕೆ ಹೋಗುವ ದಾರಿಯಲ್ಲೇ ಮಹಿಳೆಗೆ ಹೆರಿಗೆಯಾಗಿದ್ದು, ಆಗ ತಾನೇ ಜನಿಸಿದ ಮಗುವಿಗೆ ಪೆಟ್ಟಾಗಿ ಮೃತಪಟ್ಟಿದೆ. ನವಜಾತ ಶಿಶು ಮೃತಪಡಲು ಆಸ್ಪತ್ರೆಯ ವೈದ್ಯರು, ನರ್ಸ್ಗಳೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.

ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ರೂಪಾ ಗಿರೀಶ್ ಕರಬಣ್ಣನವರ (30) ಎಂಬ ಗರ್ಭಿಣಿಯನ್ನು ಮಂಗಳವಾರ ಬೆಳಗ್ಗೆ ಆಸ್ಪತ್ರೆಗೆ ಕರೆ ತರಲಾಗಿತ್ತು. ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ರೂಪಾಗೆ ಸಿಬ್ಬಂದಿ ಬೆಡ್ ನೀಡದೆ ನೆಲದ ಮೇಲೆ ಕೂರಿಸಿದ್ದರು. ಶೌಚಾಲಯ ಎಲ್ಲಿದೆ ಎಂಬ ಮಾಹಿತಿಯನ್ನೂ ನೀಡಿರಲಿಲ್ಲ. ಕೊನೆಗೆ ಅವರಿವರನ್ನು ಕೇಳಿ ಶೌಚಾಲಯಕ್ಕೆ ತೆರಳುವಾಗ ರೂಪಾಗೆ ಹೆರಿಗೆಯಾಗಿದೆ. ಈ ವೇಳೆ ಮಗುವಿಗೆ ಪೆಟ್ಟಾಗಿ ಮಗು ಮೃತಪಟ್ಟಿದೆ. ವೈದ್ಯರು, ನರ್ಸ್ಗಳು ಬರೀ ಮೊಬೈಲ್‌ನಲ್ಲಿ ಮಾತನಾಡುವುದರಲ್ಲಿ ಬ್ಯುಸಿಯಾಗಿದ್ದು, ಸೂಕ್ತ ಚಿಕಿತ್ಸೆ ಕೊಡದೆ ನಿರ್ಲಕ್ಷ್ಯ ವಹಿಸಿದ್ದಾರೆ, ನಮಗಾದ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ರೂಪಾ ಸಂಬAಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಆಪರೇಷನ್ ಕೊಠಡಿಯ ಒಳಗೆ ವೈದ್ಯರು ಮೂರು ಹೆರಿಗೆ ಮಾಡಿಸುತ್ತಿದ್ದರು. ಹಾಗಾಗಿ ಹೊರಗೆ ಕೂರಿಸಿದ್ದರು. ಮಹಿಳೆಗೆ ಇನ್ನೂ ೮ ತಿಂಗಳಾಗಿತ್ತು, ವಾಂತಿ ಬಂದAತೆ ಆಗಿದ್ದಕ್ಕೆ ವಾಷ್‌ರೂಮ್‌ಗೆ ಹೋಗಿದ್ದಾರೆ. ನಂತರ ಒಳಗೆ ಕರೆದುಕೊಂಡು ಹೋಗಿ ಹೆರಿಗೆ ಮಾಡಿಸಿದ್ದಾರೆ. ಕೂಸು ನಿನ್ನೆಯಿಂದ ಮಿಸುಕಾಡಿಲ್ಲ. ಗರ್ಭದಲ್ಲೇ ಶಿಶು ಮೃತಪಟ್ಟಿತ್ತು. ತಾಯಿ ಆರೋಗ್ಯವಾಗಿದ್ದಾರೆ. ಇದರಲ್ಲಿ ನಮ್ಮ ವೈದ್ಯರು, ಸಿಬ್ಬಂದಿ ತಪ್ಪಿಲ್ಲ. ಡಾ.ಪಿ.ಆರ್.ಹಾವನೂರು ರವರು ಬೊಗಳೆ ಬಿಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular