Monday, March 17, 2025
Flats for sale
Homeರಾಜ್ಯಕೊಡಗು: ಹೊಲದಲ್ಲಿ ಮೇಯುತ್ತಿದ್ದ ಹಸುವಿಯೊಂದಿಗೆ ಅಸಹಜ ಸೆಕ್ಸ್ ನಡೆಸಿದ್ದ ವ್ಯಕ್ತಿ ಬಂಧನ.

ಕೊಡಗು: ಹೊಲದಲ್ಲಿ ಮೇಯುತ್ತಿದ್ದ ಹಸುವಿಯೊಂದಿಗೆ ಅಸಹಜ ಸೆಕ್ಸ್ ನಡೆಸಿದ್ದ ವ್ಯಕ್ತಿ ಬಂಧನ.

ಕೊಡಗು: ಕೊಡಗಿನ ಸುಂಟಿಕೊಪ್ಪದಲ್ಲಿ ಹಸುವಿನ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಮತ್ತು ಆತನ ವಿರುದ್ಧ ಐಪಿಸಿ ಸೆಕ್ಷನ್ 377 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಬಂಧಿತ ಆರೋಪಿಯನ್ನು ಅಬೂಬಕ್ಕರ್‌ ಸಿದ್ದಿಕಿ(40) ಎಂದು ಗುರುತಿಸಲಾಗಿದ್ದು ದಾರಿಯಲ್ಲಿ ಒಂದು ಕೆಂಪು ಬಣ್ಣದ ಕೆಎ -09-6223 ಹೀರೋ ಹೋಂಡಾ ಪ್ಯಾಷನ್ ಪ್ರೋ ಬೈಕ್​ ನಿಂತಿದ್ದನ್ನು ಗಮನಿಸಿದ ದೇವಯ್ಯ, ಹೊಲದ ಬಳಿ ಹೋದಾಗ ಅಬೂಬಕ್ಕರ್‌ ಸಿದ್ದಿಕಿ ಹಸುವಿನೊಂದಿಗೆ ಸಂಭೋಗ ನಡೆಸುತ್ತಿದ್ದ ಎಂದು ಆರೋಪಿಸಿದ್ದಾರೆ.


ಕಳೆದ ಭಾನುವಾರ ಹೊಲದಲ್ಲಿ ಮೇಯುತ್ತಿದ್ದ ಹಸುವಿನೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಆರೋಪಿಸಿ ಹಸುವಿನ ಮಾಲೀಕ ದೇವಯ್ಯ ಪೊಲೀಸರಿಗೆ ದೂರು ನೀಡಿದ್ದರು.

ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಅಬುಬಕ್ಕರ್ ನನ್ನು ಬಂಧಿಸಿದ್ದಾರೆ ಮತ್ತು ಹಸುವನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ತನಿಖೆ ಮುಂದುವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular