Thursday, March 12, 2026
Flats for sale
Homeವಾಣಿಜ್ಯಸೂರತ್ : 11,000 ವಜ್ರದಲ್ಲಿ ಅರಳಿದ ದೇಶದ ದಿಗ್ಗಜ ಉದ್ಯಮಿ ರತನ್ ಟಾಟಾ ಭಾವಚಿತ್ರ..!

ಸೂರತ್ : 11,000 ವಜ್ರದಲ್ಲಿ ಅರಳಿದ ದೇಶದ ದಿಗ್ಗಜ ಉದ್ಯಮಿ ರತನ್ ಟಾಟಾ ಭಾವಚಿತ್ರ..!

ಸೂರತ್ : ಇತ್ತೀಚೆಗೆ ನಿಧನರಾದ ಉದ್ಯಮ ರತ್ನ ರತನ್ ಟಾಟಾ ಅವರಿಗೆ ೧೧ ಸಾವಿರ ವಜ್ರಗಳಿಂದ ಭಾವಚಿತ್ರ ರಚಿಸಿದ ಸೂರತ್‌ನ ಆಭರಣ ವ್ಯಾಪಾರಿಯೊಬ್ಬರು ಗೌರವ ಸಲ್ಲಿಸಿದ್ದಾರೆ.

ಸುಮಾರು 21 ವರ್ಷಗಳ ಕಾಲ ಟಾಟಾ ಸಮೂಹದ ಮುಖ್ಯಸ್ಥರಾಗಿದ್ದ ದೇಶದ ಪ್ರಮುಖ ಕೈಗಾರಿಕೋದ್ಯಮಿ ರತನ್ ಟಾಟಾ ಮೊನ್ನೆ ನಿಧನರಾಗಿದ್ದಾರೆ. ದೇಶದ ದಿಗ್ಗಜ ಉದ್ಯಮಿ ಪರೋಪಕಾರಿ ರತನ್ ಟಾಟಾ ಅವರಿಗೆ ಭಾವಪೂರ್ಣ ವಿದಾಯ ಹೇಳಿದೆ. ಆದರೆ ರತನ್ ಟಾಟಾಅವರ ಸಾಧನೆಯನ್ನು ವಜ್ರದ ವ್ಯಾಪಾರಿಯೊಬ್ಬರು ವಿನೂತನ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿರುವುದು ವಿಶೇಷ.

ಇಡೀ ದೇಶವೇ ಮೇರು ಉದ್ಯಮಿಗೆ ಶೋಕದ ವಿದಾಯ ಹೇಳಿದೆ. ಅವರು ತಮ್ಮ ಕೆಲಸದಿಂದ ಅಸAಖ್ಯಾತ ಜನರ ಮೇಲೆ ಪ್ರಭಾವ ಬೀರಿದ್ದಾರೆ. ಅವರು ಜನರ ಮನ ಗೆದ್ದಿದ್ದಾರೆ. ಜನರು ಅವರಿಗೆ ಇನ್ನೂ ವಿಭಿನ್ನ ರೀತಿಯಲ್ಲಿ ಗೌರವ ಸಲ್ಲಿಸುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಸೂರತ್‌ನ ಆಭರಣ ವ್ಯಾಪಾರಿಯೊಬ್ಬರು ಸುಮಾರು 11 ಸಾವಿರ ವಜ್ರಗಳಿಂದ ರತನ್ ಟಾಟಾ ಅವರ ಭಾವಚಿತ್ರವನ್ನು ರಚಿಸಿ ಗೌರವ ಅರ್ಪಿಸಿದ್ದಾರೆ.

ದಿವಂಗತ ರತನ್ ಟಾಟಾ ಅವರಿಗೆ ಗೌರವಾರ್ಥವಾಗಿ ಸೂರತ್‌ನ ಆಭರಣ ವ್ಯಾಪಾರಿಯೊಬ್ಬರು 11000 ವಜ್ರಗಳಿಂದ ಅವರ ಚಿತ್ರವನ್ನು ಕೆತ್ತಿದ್ದಾರೆ. ಇದಕ್ಕೆ ಸಂಬAಧಿಸಿದ ವಿಡಿಯೋ ಸದ್ಯ ಇನ್‌ಸ್ಟಾಗ್ರಾಂನಲ್ಲಿವೈರಲ್ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular