Friday, March 13, 2026
Flats for sale
Homeಜಿಲ್ಲೆಸುಳ್ಯ : ಗುಂಪಿನಿಂದ ಬೇರ್ಪಟ್ಟ ಮರಿ ಆನೆಯನ್ನು ರಕ್ಷಿಸಿದ ಅರಣ್ಯ ಇಲಾಖೆ.

ಸುಳ್ಯ : ಗುಂಪಿನಿಂದ ಬೇರ್ಪಟ್ಟ ಮರಿ ಆನೆಯನ್ನು ರಕ್ಷಿಸಿದ ಅರಣ್ಯ ಇಲಾಖೆ.

ಸುಳ್ಯ : ಕಳೆದ ಹಲವು ದಿನದಿಂದ ಕಾಡುಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಬಳಿಯ ಕನ್ಯಾನದಲ್ಲಿ ಕಾಡಾನೆ ಹಿಂಡಿನಿಂದ ತಪ್ಪಿಸಿಕೊಂಡ ಮರಿ ಆನೆ ಸಿಕ್ಕಿದ ಘಟನೆ ವರದಿಯಾಗಿದೆ.

ಮಂಡೆಕೋಲು ಪರಿಸರದಲ್ಲಿದ್ದ ಆನೆಗಳ ಹಿಂಡು ಅಡ್ಡಾಡುತ್ತಿರುವಾಗ ಆನೆಗಳ ಗುಂಪಿನಿಂದ ಮರಿ ಆನೆಯೊಂದು ರಸ್ತೆ ಬದಿಯಲ್ಲಿ ನಿಂತಿದ್ದು ಮರಿ ಆನೆಯನ್ನ ಅರಣ್ಯ ಇಲಾಖೆ ರಕ್ಷಿಸಿದೆ.

ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸಾರ್ವಜನಿಕರು ಆನೆಮರಿಯನ್ನು ಕೊಂಡೊಯ್ಯುವಲ್ಲಿಸಾಥ್ ನೀಡಿದ್ದು , ಆರೋಗ್ಯಕರವಾಗಿರುವ ಮರಿ ಆನೆಗೆ ಸದ್ಯ ಅರಣ್ಯಾಧಿಕಾರಿಗಳು ಆರೈಕೆ
ನೀಡುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular