ಸುಳ್ಯ : ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ದೇವರ ಕೊಳ್ಳಿ ತಿರುವಿನಲ್ಲಿ ಸ್ವಿಫ್ಟ್ ಕಾರು ಮತ್ತು ಕಂಟೈನರ್ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಜೂ.21ರಂದು ಬುಧವಾರ ರಾತ್ರಿ ನಡೆದಿದೆ. ಗಾಯಾಳುಗಳನ್ನು ಪ್ರಸ್ತುತ ಸುಳ್ಯ ಆಸ್ಪತ್ರೆಗೆ ಸಾಗಿಸಲಾಗುತ್ತಿದ್ದು, ಕಂಟೈನರ್ ಲಾರಿ ಚಾಲಕನಿಗೆ ತೀವ್ರ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ. ಕಂಟೈನರ್ ಲಾರಿ ಮಡಿಕೇರಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದು, ಕಾರು ಧರ್ಮಸ್ಥಳದಿಂದ ಸಂಪಾಜೆ ಮೂಲಕ ಮಡಿಕೇರಿಗೆ ತೆರಳುತ್ತಿತ್ತು. ಗಾಯಗೊಂಡವರು ಮೈಸೂರಿನವರು ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.


