Wednesday, November 5, 2025
Flats for sale
Homeಜಿಲ್ಲೆಸುಳ್ಯ : ಕಾಣೆಯಾದ ಬಾಲಕಿಯ ಪತ್ತೆಗೆ ಸಹಕರಿಸಿದ ಯುವ ಪತ್ರಕರ್ತರನ್ನು ಸನ್ಮಾನಿಸಿದ ಸ್ಪೀಕರ್ ಯು.ಟಿ.ಖಾದರ್.

ಸುಳ್ಯ : ಕಾಣೆಯಾದ ಬಾಲಕಿಯ ಪತ್ತೆಗೆ ಸಹಕರಿಸಿದ ಯುವ ಪತ್ರಕರ್ತರನ್ನು ಸನ್ಮಾನಿಸಿದ ಸ್ಪೀಕರ್ ಯು.ಟಿ.ಖಾದರ್.

ಸುಳ್ಯ : ನಾಪತ್ತೆಯಾದ ಬಾಲಕಿಯನ್ನು ಒಂದು ಗಂಟೆಯೊಳಗೆ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಂಗಳೂರಿನ ಮೂವರು ಪತ್ರಕರ್ತರನ್ನು ಸನ್ಮಾನಿಸುವ ಕಾರ್ಯಕ್ರಮಕ್ಕೆ ಸುಬ್ರಹ್ಮಣ್ಯ ಸಮೀಪದ ಕೊಲ್ಲಮಗರುವಿನ ಪತ್ರಕರ್ತರ ಗ್ರಾಮವಾಸ್ತವ್ಯ ಸಾಕ್ಷಿಯಾಯಿತು. ಬಂಗ್ಲೆಗುಡ್ಡೆ ಶಾಲೆಯಲ್ಲಿ ಪತ್ರಕರ್ತರ ಐದನೇ ಗ್ರಾಮ ವಾಸ್ತವ್ಯದಲ್ಲಿ ಪತ್ರಕರ್ತರನ್ನು ಸ್ಪೀಕರ್ ಯು.ಟಿ.ಖಾದರ್ ಸನ್ಮಾನಿಸಿದರು.

ಪತ್ರಕರ್ತರು ಚಾರಣಕ್ಕೆ ಹೊರಟಿದ್ದಾಗ ಬಾಗಲಕೋಟೆಯ ಕೂಲಿ ಕಾರ್ಮಿಕನೊಬ್ಬ ಕಾಣೆಯಾಗಿದ್ದ ಮಗಳನ್ನು ಹುಡುಕುತ್ತಿದ್ದಳು. ಯುವತಿ ಕೆಎಸ್‌ಆರ್‌ಟಿಸಿ ಬಸ್‌ ಹತ್ತಿದ್ದಾಳೆ ಎಂಬ ಮಾಹಿತಿ ಕಲೆಹಾಕಿದ ಪತ್ರಕರ್ತರು ಪೊಲೀಸರ ನೆರವಿನಿಂದ ಒಂದು ಗಂಟೆಯೊಳಗೆ ಉಡುಪಿ ಬಳಿ ಪತ್ತೆಯಾದರು.ಇವರು ಮೂವರು ಪತ್ರಕರ್ತರು ಚಾರಣ ಪ್ರಿಯರಾಗಿದ್ದು ಮೋಹನ್ ಕುತ್ತಾರ್ ರವರ ಜೀಪ್ ನಲ್ಲಿ ರಜಾದಿನಗಳಲ್ಲಿ ಹೊಸ ಸ್ಥಳಗಳನ್ನು ಅನ್ವೇಷಣೆ ಮಾಡುತ್ತ ಹೋಗುತ್ತಿರುತ್ತಾರೆ . ಮೊನ್ನೆ ನಡೆದ ಘಟನೆಯಲ್ಲಿ ಇವರಿಂದ ಆದ ಈ ಸಹಾಯಕ್ಕೆ ಯುವತಿಯ ಪೋಷಕರು ಸಂತೋಷ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular