ಸುರಪುರ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪೊಲೀಸ್ರು ಮೂವರು ಅಂತರ ಜಿಲ್ಲಾ ಕುರಿ ಕಳ್ಳರನ್ನು ಬಂಧಿಸಿದ್ದಾರೆ
ಪರಸನಹಳ್ಳಿ ಗ್ರಾಮದಲ್ಲಿ ಮನೆ ಮುಂದೆ ಕಟ್ಟಿ ಹಾಕಲಾಗಿದ್ದ ಎರಡು ಕಡೆಗಳಲ್ಲಿನ ಒಟ್ಟು ಐದು ಕುರಿಗಳು ಕಳ್ಳತನವಾಗಿರುವ ಕುರಿತು ಕೆಂಭಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು
ಕೆಂಭಾವಿ ಠಾಣೆಯ ಪಿಎಎಸ್ಐ ರಾಜಶೇಖರ ರಾಥೋಡ್ ಮತ್ತೋರ್ವ ಪಿಎಸ್ಐ ಯಂಕಣ್ಣ ಇವರುಗಳು ಸುರಪುರ ಕೆಂಭಾವಿ ಮಾರ್ಗ ಮಧ್ಯದ ತಿಪ್ಪನಟಗಿ ಕ್ರಾಸ್ ಬಳಿಯಲ್ಲಿ ಹೋಗುತ್ತಿರುವಾಗ ಪೊಲೀಸರ ಜೀಪ್ ಕಂಡು ಮೂವರು ಓಡಿ ಹೋಗುವುದನ್ನ ಗುರುತಿಸಿ ವಶಕ್ಕೆ ಪಡೆದಿದ್ದಾರೆ
ಮೂವರನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ಪರಸನಹಳ್ಳಿಯಲ್ಲಿ ಐದು ತಳ್ಳಳ್ಳಿ ಬಿ ಗ್ರಾಮದಲ್ಲಿ 15 ಹುಣಸಗಿ ಪಟ್ಟಣದ ಹೊರವಲಯದಲ್ಲಿ 15 ಕುರಿಗಳ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಬಂದಿತರಿಂದ ಒಂದು ಲಕ್ಷ ಒಂದು ಸಾವಿರ ರೂಪಾಯಿ ನಗದು ಒಂದು ಬುಲೆರೋ ಪಿಕಪ್ ಇನ್ನೊಂದು ಟಾಟಾ ಏಸ್ ಹಾಗೂ ಮೂರು ಮೋಟರ್ ಸೈಕಲ್‌ಗಳನ್ನ ವಶಪಡಿಸಿಕೊಂಡಿದ್ದಾರೆ
ಬಂದಿತ ಆರೋಪಿಗಳು ಲಕ್ಷ್ಮಣ ದುರ್ಗಮುರ್ಗಿ, ಶೇಖಪ್ಪ ದುರ್ಗಮುರ್ಗಿ ಹಾಗೂ ಸುರೇಶ ದುರ್ಗಮುರ್ಗಿಯಾಗಿದ್ದು ಮೂವರು ಅಂತಪ್ಪನ ಓಣಿ ಕಮಲಾಪುರ ಧಾರವಾಡದವರು ಎಂದು ಪೊಲೀಸರು ತಿಳಿಸಿದ್ದಾರೆ.
ಕೆಂಭಾವಿ ಪೊಲೀಸ್ ಠಾಣೆಯ ಪಿಎಸ್ಐ ರಾಜಶೇಖರ ರಾಠೋಡ, ಪಿಎಸ್ಐ ಯಂಕಣ್ಣ ಇವರುಗಳು ತಂಡದ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಸಂಗೀತ, ಡಿ ವೈ ಎಸ್ ಪಿ ಜಾವೇದ್ ಇನಾಂದಾರ್ ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ


