Thursday, December 12, 2024
Flats for sale
Homeರಾಜ್ಯಶಿವಮೊಗ್ಗ: 12 ಗ್ರಾಂ ತೂಕದ ಚಿನ್ನದ ಸರವನ್ನೇ ನುಂಗಿದ ಹಸು.

ಶಿವಮೊಗ್ಗ: 12 ಗ್ರಾಂ ತೂಕದ ಚಿನ್ನದ ಸರವನ್ನೇ ನುಂಗಿದ ಹಸು.

ಶಿವಮೊಗ್ಗ : ಕೋಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ ಎಂಬ ಒಂದು ಜಾನಪದ ಹಾಡಿನ ಹಾಗೆ 12 ಗ್ರಾಂ ಬಂಗಾರವ ನುಂಗಿತ್ತ ನಮ್ಮ ಹಸು … ಗೋಪೂಜೆ ವೇಳೆ ಆಕಸ್ಮಿಕವಾಗಿ ಹಸುವೊಂದರ ಹೊಟ್ಟೆ ಸೇರಿದ್ದ 12 ಗ್ರಾಂ ತೂಕದ ಚಿನ್ನದ ಸರವನ್ನು ಪಶುವೈದ್ಯರು ಶಸ್ತçಚಿಕಿತ್ಸೆ ಮೂಲಕ ಹೊರ ತೆಗೆದ ಘಟನೆ ಹೊಸನಗರ ತಾಲೂಕಿನ ಮತ್ತಿಮನೆ ಗ್ರಾಮದಲ್ಲಿ ನಡೆದಿದೆ.

ಮೊನ್ನೆ ಶ್ಯಾಮ ಉಡುಪ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ದೀಪಾವಳಿ ಗೋಪೂಜೆ ಮಾಡುವ ವೇಳೆ ಮನೆಯವರು ಕಳಸಕ್ಕೆ ಚಿನ್ನದ ಸರವನ್ನಿಟ್ಟು ಪೂಜಿ ಸಿದ್ದರು. ಈ ವೇಳೆ ಪೂಜೆಗಿಟ್ಟಿದ್ದ ಪ್ರಸಾದದ ಜೊತೆಗೆ ಆಕಸ್ಮಿಕವಾಗಿ ಬಂಗಾರದ ಸರವನ್ನು ಕೂಡ ಹಸು ನುಂಗಿದೆ. ಇದು ಮನೆಯವರ ಗಮನಕ್ಕೆ ಬಂದಿರಲಿಲ್ಲ. ಚಿನ್ನದ ಸರಕ್ಕಾಗಿ ಕುಟುಂಬದವರು ಎಲ್ಲೆಡೆ ಹುಡುಕಾಡಿದ್ದರೂ ಪತ್ತೆಯಾಗಿರಲಿಲ್ಲ. ತದನಂತರ ಬAಗಾರದ ಸರ ಹಸುವಿನ ಹೊಟ್ಟೆ ಸೇರಿರುವ ಶಂಕೆ ವ್ಯಕ್ತಪ ಡಿಸಿದ್ದರು. ಈ ನಡುವೆ ಏಕಾಏಕಿ ಹಸು ಹುಲ್ಲು ತಿನ್ನುವುದನ್ನು ಕಡಿಮೆ ಮಾಡಿತ್ತು. ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು

ಈ ಹಿನ್ನೆಲೆಯಲ್ಲಿ ಕುಟುಂಬದವರು ಪಶು ವೈದ್ಯರಿಗೆ ಮಾಹಿತಿ ನೀಡಿದ್ದು, ಕೋಣಂದೂರಿನ ಹಿರಿಯ ಪಶು ವೈದ್ಯಾಧಿಕಾರಿ ಡಾ. ಆನಂದ್ ಅವರು ಸ್ಥಳಕ್ಕಾಗಮಿಸಿ ಹಸುವನ್ನು ಪರಿಶೀಲಿಸಿದ್ದರು. ಕಳೆದ ಭಾನುವಾರ ಶಸ್ತçಚಿಕಿತ್ಸೆ ನಡೆಸಿ, ಹೊಟ್ಟೆಯಲ್ಲಿದ್ದ ಚಿನ್ನದ ಸರ ಹೊರತೆಗೆದಿದ್ದಾರೆ. ಸದ್ಯ ಹಸುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ. ಯಾವುದೇ ತೊಂದರೆಯಿಲ್ಲವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular