ಶಿವಮೊಗ್ಗ ; 1 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಗ್ರಾಮಾಡಳಿತಾಧಿಕಾರಿ ಬಿದ್ದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಗ್ರಾಮದಲ್ಲಿ ನಡೆದಿದೆ.
ಶಿಕಾರಿಪುರ ತಾಲ್ಲೂಕಿನ ಚಿಕ್ಕಜಂಬೂರು ಗ್ರಾಮದ ವಿಲೇಜ್ ಅಕೌಂಟೆಂಟ್ ವಿಠ್ಠಲ್ ಕೋಲ್ಹಾರ ಲೋಕಾ ಬಲೆಗೆ ಬಿದ್ದ ಭೃಷ್ಟ ಅಧಿಕಾರಿ.
ಗ್ರಾಮದ ಕೆಲ ಕಾರ್ಯಕ್ಕೆ ಜನಸಾಮಾನ್ಯರನ್ನು ಸತಯಿಸುತ್ತಿದ್ದ ಈತ 1 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಟ್ರ್ಯಾಪ್ ಆಗಿದ್ದಾನೆ.ಈತನ ಮೇಲೆ ಹಲವು ದೂರುಗಳಿದ್ದು ಇದೀಗ ಲೋಕಯುಕ್ತ ಬಲೆಗೆ ಬಿದ್ದಿದ್ದಾನೆ.


