Friday, March 13, 2026
Flats for sale
Homeರಾಜ್ಯಶಿವಮೊಗ್ಗ : ಡಿಸೇಲ್ ಖಾಲಿಯಾಗಿ ರಸ್ತೆ ಮಧ್ಯೆ ನಿಂತ KSRTC ಬಸ್,ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ ಪ್ರಯಾಣಿಕರು...

ಶಿವಮೊಗ್ಗ : ಡಿಸೇಲ್ ಖಾಲಿಯಾಗಿ ರಸ್ತೆ ಮಧ್ಯೆ ನಿಂತ KSRTC ಬಸ್,ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ ಪ್ರಯಾಣಿಕರು !

ಶಿವಮೊಗ್ಗ : ಶಿವಮೊಗ್ಗದಿಂದ ಕುಂದಾಪುರ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮಾರ್ಗ ಮಧ್ಯದಲ್ಲಿ ಡಿಸೇಲ್ ಖಾಲಿಯಾಗಿ ನಿಂತ ಘಟನೆ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಬಳಿ ನಡೆದಿದೆ.ಸಂಜೆ 5-30 ರ ವೇಳೆಗೆ ನಡೆದ ಈ ಘಟನೆ ನಡೆದಿದ್ದು ಪ್ರಯಾಣಿಕರು ಸರಿಯಾದ ಸಮಯಕ್ಕೆ ತಲುಪದೇ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದು ಮಾರ್ಗ ಮಧ್ಯೆ ಬಸ್ ನಿಂತ ಪರಿಣಾಮ ಡ್ರೈವರ್ ಕಂಡಕ್ಟರ್ ಗಳನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

ಸರಕಾರ ಅಧಿಕಾರಕ್ಕೆ ಬರಲು ನೀಡಿದ ಫ್ರೀ ಬಸ್ ವ್ಯವಸ್ಥೆಯಿಂದ ಸರಕಾರದ ಖಜಾನೆ ಬರಿದಾಗಿದ್ದು,ಕೆಲ ಸರಕಾರಿ ಸಂಸ್ಥೆಯ ನೌಕರರಿಗೆ ಸಂಬಳಕೊಡದೆ ಹಲವು ತಿಂಗಳುಗಳಾಗಿವೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ದೊರೆತಿದೆ.

ಸರ್ಕಾರಕ್ಕೆ ಬುಸು ಗಳಿಗೆ ಡಿಜಲ್ ಹಾಕಲು ಹಣವಿಲ್ಲ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದು ದಾರಿ ಮದ್ಯೆ ಇಳಿಸುವುದು ಇದೆ ಮೊದಲ ಬಾರಿ ಎಂದು ಹೊಸನಗರ ನಿವಾಸಿ ಸತೀಶ್ ತಿಳಿಸಿದ್ದಾರೆ.ಸರ್ಕಾರಕ್ಕೆ ಡಿಜಲ್ ಹಾಕಲು ಹಣ ವಿಲ್ಲದೆ ಖಜಾನೆ ಖಾಲಿ ಆಯ್ತಾ ? ಇನ್ನು ಮುಂಧೆ ಫ್ರೀ ಬಸ್ ksrtc ಬಸ್ ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರೇ ಎಚ್ಚರ ಎಂದು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಬಿಜೆಪಿ ಹೊಸ ನಗರ ಕಾರ್ಯಕರ್ತ ನಿತಿನ್ ಮತ್ತು ಸ್ಥಳೀಯ ಜನರ ಸಹಾಯದಿಂದ ಬೇರೆ ಬಸ್ ವ್ಯವಸ್ಥೆ ಮಾಡಿ ಪ್ರಯಾಣಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular