ಶಿವಮೊಗ್ಗ : ಖಾಸಗಿ ಬಸ್ ಹಾಗೂ ಕಾರು ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ ಘಟನೆ ಶಿವಮೊಗ್ಗಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ ಮುರುಘಮಠದ ಸಮೀಪ ನಡೆದಿದೆ.
ದೊಡ್ಡಬಳ್ಳಾಪುರ ಮೂಲದ ಅಕ್ಷಯ್ (22), ಶರಣ್ (28) ಮೃತರು.
ಕಾರು ಸಾಗರದಿಂದ ಶಿವಮೊಗ್ಗ ಕಡೆಗೆ ತೆರಳುತ್ತಿತ್ತು. ಬಸ್ಸು ಶಿವಮೊಗ್ಗದಿಂದ ಸಾಗರ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಡಿಕ್ಕಿಯಾಗಿದೆ ಮೃತರು ಕಾರಿನಲ್ಲಿ ಪ್ರವಾಸಕ್ಕೆ ಬಂದಿದ್ದರು ಎನ್ನಲಾಗಿದ್ದು ಇನ್ನುಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಮಾಹಿತಿ ದೊರೆತಿದೆ.ಸ್ಥಳಕ್ಕೆ ಆನಂದಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


