Friday, March 13, 2026
Flats for sale
Homeರಾಜ್ಯಶಿವಮೊಗ್ಗ : ಒಂದೇ ಕುಟುಂಬದ ಮೂವರು ಸಜೀವವಾಗಿ ದಹನ.

ಶಿವಮೊಗ್ಗ : ಒಂದೇ ಕುಟುಂಬದ ಮೂವರು ಸಜೀವವಾಗಿ ದಹನ.

ಶಿವಮೊಗ್ಗ : ತೀರ್ಥಹಳ್ಳಿ ತಾಲೂಕಿನ ಕೆಕೋಡ್ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಸಜೀವವಾಗಿ ದಹನಗೊಂಡಿದ್ದು ಓರ್ವನ ಸ್ಥಿತಿ ಗಂಭೀರವಾಗಿದೆ.

ಮೃತಪಟ್ಟವರೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶAಕೆ ವ್ಯಕ್ತವಾಗಿದ್ದು, ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆ.

ಅರ್ಚಕರಾಗಿದ್ದ ರಾಘವೇಂದ್ರ ಕೆಕೋಡ್ (೬೫), ಪತ್ನಿ ನಾಗರತ್ನಾ (೫೫) ಹಾಗೂ ಹಿರಿಯ ಪುತ್ರ ಶ್ರೀರಾಮ್ (೩೦) ಮೃತರು. ಮತ್ತೊಬ್ಬ ಪುತ್ರ ಭರತ್ (೨೮) ಗಂಭೀರವಾಗಿ ಗಾಯಗೊಂಡವರು. ಮನೆಯ ಕೋಣೆಯೊಳಗೆ ಸೌದಿ ಜಮೆ ಮಾಡಿಕೊಂಡಿದ್ದ ಇವರು, ತಮಗೆ ತಾವೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬAದಿದೆ. ಆದರೆ, ಇವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎಂಬುದು ಇದುವರೆಗೆ ತಿಳಿದುಬಂದಿಲ್ಲ.

ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿರುವ ಪೊಲೀಸರು ಪ್ರಕರಣದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular