ಶಿವಮೊಗ್ಗ: ಹಣ-ಆಸ್ತಿ ವಿಚಾರ ಬಂದರೆ ಎಲ್ಲರೂ ಶತ್ರುಗಳಾಗಿ ಬಿಡುತ್ತಾರೆ ಎಂಬುದಕ್ಕೆ ಇಲ್ಲಿದೆ ಸುದ್ದಿ.ಆಸ್ತಿಗಾಗಿ, ಇಬ್ಬರು ಸಹೋದರರು ಸೇರಿ ಕಾರು ಹತ್ತಿಸಿ ಅಣ್ಣನನ್ನೇ ಹತ್ಯೆಗೈದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಚಿಪ್ಪಳ್ಳಿ ಬಳಿ ಫೆ.29ರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ರಫೀಕ್ (45) ಕೊಲೆಯಾದ ದುರ್ದೈವಿ ಎಂದು ತಿಳಿದುಬಂದಿದೆ.ಈ ಘಟನೆ ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ಕಾರು ಹತ್ತಿಸಿ ಹತ್ಯೆ ಮಾಡಿರುವ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ.
ಆಸ್ತಿ ವಿಚಾರಕ್ಕೆ ಇವರ ನಡುವೆ ಜಗಳವಾಡುತಿದ್ದು ಅದೀಗ ತಾರಕಕ್ಕೆ ಏರಿದೆ. ಸಮೀರ್, ಇದಾಯತ್ ಎಂಬ ಸಹೋದರರು ಸೇರಿ ರಫೀಕ್ ಎಂಬಾತನ ಮೇಲೆ ಕಾರು ಹತ್ತಿಸಿ ಕೊಂದಿದ್ದಾರೆ. ಜನರು ಓಡಾಡುವ ಸಮಯದಲ್ಲೇ ರಫೀಕ್‌ನನ್ನು ಹಿಡಿದು ಪ್ರಾಣಹೋಗುವಂತೆ ಥಳಿಸಿದ್ದರು. ಗಲಾಟೆ ನಂತರ ಕಾರಲ್ಲಿ ಕುಳಿತ ಸಮೀರ್, ಇದಾಯತ್ ರಸ್ತೆ ಬದಿಯಲ್ಲಿದ್ದ ರಫೀಕ್ ಮೇಲೆ ಕಾರು ಹತ್ತಿಸಿದ್ದರು. ಕಾರು ಹತ್ತಿಸಿ ಕೊಲ್ಲುವ ದೃಶ್ಯವನ್ನು ಅಲ್ಲಿದ್ದ ಇತರೆ ವಾಹನ ಸವಾರರು ವಿಡಿಯೊ ಮಾಡಿಕೊಂಡಿದ್ದರು.ಸಹೋದರನ ಮೇಲೆ ಕಾರು ಹತ್ತಿಸಿ ಕೊಲೆ ಮಾಡ್ತಿರುವ ದೃಶ್ಯ ತುಂಬಾನೇ ಭಯಾನಕವಾಗಿದೆ.


