Saturday, March 14, 2026
Flats for sale
Homeರಾಜ್ಯಶಿವಮೊಗ್ಗ : ಅನ್ಯಕೋಮಿನ ವ್ಯಕ್ತಿಯಿಂದ ಗಣಪತಿ - ನಾಗರ ವಿಗ್ರಹ ದ್ವಂಸ,ಸ್ಥಳದಲ್ಲಿ ಬಿಗುವಿನ ವಾತಾವರಣ..!

ಶಿವಮೊಗ್ಗ : ಅನ್ಯಕೋಮಿನ ವ್ಯಕ್ತಿಯಿಂದ ಗಣಪತಿ – ನಾಗರ ವಿಗ್ರಹ ದ್ವಂಸ,ಸ್ಥಳದಲ್ಲಿ ಬಿಗುವಿನ ವಾತಾವರಣ..!

ಶಿವಮೊಗ್ಗ : ನಗರದ ರಾಗಿಗುಡ್ಡದ ಶಾಂತಿನಗರ ಬಂಗಾರಪ್ಪ ಬಡಾವಣೆ ಯಲ್ಲಿ ಅನ್ಯಕೋಮಿನ ವ್ಯಕ್ತಿ ಗಣಪತಿ ಹಾಗೂ ನಾಗರ ವಿಗ್ರಹ ದ್ವಂಸಗೊಳಿಸಿದ ಘಟನೆ ನಡೆದಿದೆ.ಬಡಾವಣೆಯ ಮುಖ್ಯ ರಸ್ತೆಯಲ್ಲಿ ಇತ್ತೀಚೆಗೆ ಪ್ರ ಗಣಪತಿ ವಿಗ್ರಹ ಹಾಗೂ ನಾಗದೇವ ವಿಗ್ರಹ ತಿಷ್ಠಾಪನೆ ಮಾಡಿದ್ದು ಅನ್ಯಕೋಮಿನ ವ್ಯಕ್ತಿಯಿಂದ ಈ ಕೃತ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಶಾಂತಿನಗರದ ಬಂಗಾರಪ್ಪ ಬಡಾವಣೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.ಸ್ಥಳಕ್ಕೆ ಎಎಸ್ಪಿ ಸೇರಿ ಡಿವೈಎಸ್ಪಿ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಹಿಂದೂ ದೇವರನ್ನ ಅವಮಾನ ಮಾಡಲಾಗಿದೆ ಎಂದು ಅನ್ಯಕೋಮಿನವರ ವಿರುದ್ದ ಹಿಂದೂ ಮುಖಂಡರ ಆಕ್ರೋಶಹೊರಹಾಕಿದ್ದಾರೆ. ರಾಗಿಗುಡ್ಡದಲ್ಲಿ ನಡೆದಿರುವ ಗಣಪತಿ ಹಾಗೂ ನಾಗರ ವಿಗ್ರಹ ದ್ವಂಸ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಶಾಸಕ ಚನ್ನಬಸಪ್ಪ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಯಾರು ಧ್ವಂಸ ಮಾಡಿದ್ದಾರೋ ಅವರ ಮೇಲೆ FIR ದಾಖಲಿಸಲು ಆಗ್ರಹಿಸಿದ್ದು ಎದುರು ಭಾಗದಲ್ಲಿರುವ ಅನ್ಯಕೋಮಿನ ಮನೆಯೊಂದು ಅಕ್ರಮವಾಗಿ ಕಟ್ಟುತ್ತಿದ್ದಾರೆ ಅವರಿಗೆ ತೊಂದರೆಯಾದರೆ ಅವರು ಈ ಭಾಗದಲ್ಲಿ ಇರುವ ಅರ್ಹತೆ ಇಲ್ಲ ಎಂದು ಶಾಸಕ ಚನ್ನಬಸಪ್ಪ ಗರಂ ಆಗಿದ್ದಾರೆ.

ಬಳಿಕ ಆಯುಕ್ತರಿಗೆ ಕರೆ ಮಾಡಿ ಇಲ್ಲಿ ಅಕ್ರಮವಾಗಿ ಮನೆಯೊಂದು ಕಟ್ಟುತ್ತಿದ್ದಾರೆ ಅದನು ದಾಖಲಾತಿ ಪರಿಶೀಲಿಸಿ ಅದನ್ನು ಅಕ್ರಮವಾಗಿದ್ದರೆ ಅದನ್ನು ತಕ್ಷಣವೇ ತೆರವುಗೊಳಿಸಬೇಕಾಗಿ ಸೂಚನೆ ನೀಡಿದ್ದಾರೆ. ಬಂಗಾರಪ್ಪ ಬಡಾವಣೆಯಲ್ಲಿ ವಾಸಿಸುತ್ತಿರುವ ಹಿಂದೂ ಜನಗಳಿಗೆ ಸೂಕ್ತ ಭದ್ರತೆಯನ್ನು ಕೊಡಬೇಕು ಎಂದು ಶಾಸಕ ಚನ್ನಬಸಪ್ಪ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular