ಶಿರಾ : ಶಿರಾ ಮತ್ತು ಗುಬ್ಬಿ ಗಡಿ ಭಾಗದ ಅರಣ್ಯಕ್ಕೆ ಸಮೀಪದ ಗ್ರಾಮದಲ್ಲಿ ಚಿರತೆ ಬಂದಿದ್ದು,ಗ್ರಾಮಸ್ಥರು ಇದನ್ನು ಕಂಡಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಗುರುವಾರ ಸ್ದಳ ಪರಿಶೀಲನೆ ನಡೆಸಿದ್ದು ಯಾವುದೇ ಸುಳಿವು ಇಲ್ಲ ಅಥವಾ ಹೆಜ್ಜೆಯ ಗುರುತು ಇಲ್ಲ ಕಾಡು ಹಂದಿ ಓಡಾಡಿರುವ ಗುರುತು ಇದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಚಿರತೆ ಕಾಣಿಸಿಕೊಂಡಿರುವ ಸ್ಥಳವು ಅರಣ್ಯ ಪ್ರದೇಶದಿಂದ ಕೇವಲ ದೂರದಲ್ಲಿದೆ. ಅವು ಅರಣ್ಯ ಪ್ರದೇಶದಿಂದ ದೂರ ಸರಿಯುವುದು ಸಹಜ ಎಂದು ಅರಣ್ಯ ಅಧಿಕಾರಿ ತಿಳಿಸಿದರು.ಹಾಗೂ ಈ ಪ್ರದೇಶದಲ್ಲಿ ಅಲೆದಾಡುತ್ತಿದ್ದ ಬಗ್ಗೆ ಈ ಮೂರು ದಿನಗಳ ಹಿಂದೆ ಚಿರತೆಯ ಮಾಹಿತಿ ದೊರೆತಿದೆ ಸೆರೆ ಹಿಡಿಯುವ ತೀವ್ರ ನಿಗಾ ವಹಿಸಲಾಗಿದೆ. ಹಾಗೂ ಇಂದು ಯಾವುದೇ ಚಿರತೆ ಗುರುತು ಮಾತ್ರ ಕಾಣಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಚಿರತೆಯೂ ಹತ್ತಿರವೇ ಓಡಾಡುತ್ತಿದೆ ಎಂಬ ಮಾಹಿತಿ ಸಿಕ್ಕ ತಕ್ಷಣವೇ ಅರಣ್ಯಧಿಕಾರಿ ಹಾಗೂ ಹಾಗೂ ಕಳ್ಳಂಬೆಳ್ಖ ಪೊಲೀಸರು ಭೇಟಿ ನೀಡಿ ಮಾಹಿತಿ ಸಂಗಹಿಸಿದಲ್ಲದೆ ಈ ಪ್ರದೇಶದಲ್ಲಿ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದಾರೆ.ಚಿರತೆ ಓಡಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಅರಣ್ಯಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದ ನಿವಾಸಿಗಳು ಮತ್ತು ಬೈಕ ಸವಾರರಿಗೆ ಚಿರತೆ ಓಡಾಡಿದ ಪ್ರದೇಶದಲ್ಲಿ ಒಬ್ಬಂಟಿಯಾಗಿ ಓಡಾಡುಬಾರದು, ರಾತ್ರಿ ಸಮಯ ಆ ಪ್ರದೇಶದಲ್ಲಿ ಹೋಗಬಾರದು. ಆಕಸ್ಮಾತ ಹೋಗಬೇಕಾದರೆ ಗುಂಪು ಗುಂಪಾಗಿ ತೆರಳುವಂತೆ ಎಚ್ಚರಿಕೆಯ ಸಂದೇಶ ನೀಡುಲಾಗಿದೆ ಎಂದು ತಿಳಿಸಿದ್ದಾರೆ.


