Saturday, March 14, 2026
Flats for sale
Homeರಾಜ್ಯಶಿರಾ ; ರೈತರ ಮಕ್ಕಳಿಗೆ ಹೆಣ್ಣು ಕೊಡ್ತಿಲ್ಲ: ಕನ್ಯಾಭಾಗ್ಯ ಯೋಜನೆ ಜಾರಿಗೆ ತಂದು ಮದುವೆ ಮಾಡಿಸಿ...

ಶಿರಾ ; ರೈತರ ಮಕ್ಕಳಿಗೆ ಹೆಣ್ಣು ಕೊಡ್ತಿಲ್ಲ: ಕನ್ಯಾಭಾಗ್ಯ ಯೋಜನೆ ಜಾರಿಗೆ ತಂದು ಮದುವೆ ಮಾಡಿಸಿ ಎಂದು ಅರ್ಜಿ ಸಲ್ಲಿಸಿದ ರೈತ.

ಶಿರಾ ; ನಗರದ ಮಿನಿ ವಿಧಾನ ಸೌದ ಆವರಣದಲ್ಲಿ ಇದು ಶಿರಾ ನಗರದ ಮಿನಿ ವಿಧಾನ ಸೌಧ ಆವರಣದಲ್ಲಿ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಿಸಲಾಗಿತ್ತು.

ತುಮಕೂರು ಜಿಲ್ಲಾಧಿಕಾರಿಗಳಾಗಿ ಶುಭಾ ಕಲ್ಯಾಣ್ ಜನತಾದರ್ಶನದಲ್ಲಿಭಾಗಿಯಾಗಿದರು ಈ ಸಂದರ್ಭದಲ್ಲಿ ಜನರ ಅಹ್ವಾಲುಗಳನ್ನು ಸ್ವೀಕರಿಸುವ ಸಮಯದಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡ್ಸಿ ಎಂದು ಶಿರಾ ತಾಲೂಕಿನ ಚಿಕ್ಕನಕೋಟೆ ಗ್ರಾಮದ ರಾಮಣ್ಣ ರೈತ ಪತ್ರ ಹಿಡಿದು ಓಡಾಡುವ ವಿಡಿಯೋ ಸಾಮಾಜಿಕ ಜಾಲದಲ್ಲಿ ವೈರಲ್ ಆಗಿದ್ದು ಜನತಾದರ್ಶನ ಕಾರ್ಯಕ್ರಮದಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಎಂದು ಅರ್ಜಿ ಸಲ್ಲಿಸುವ ಮೂಲಕ ಗಮನ ಸೆಳೆದರು.

ರೈತರು ದೇಶದ ಬೆನ್ನಲುಬು, ಅನ್ನ ಹಾಕುವ ದೇವರು ಎಂಬೆಲ್ಲ ಹೊಗಳಿಕೆ ಬೇಡ. ಕನ್ಯಾಭಾಗ್ಯ ಯೋಜನೆ ಜಾರಿಗೊಳಿಸಿ ರೈತ ಮಕ್ಕಳಿಗೆ ಮದುವೆ ಮಾಡಿಸಿ ಎಂದು ಚಿಕ್ಕನಕೋಟೆ ಗ್ರಾಮದ ರಾಮಣ್ಣ . ಕೃಷಿ ಕೆಲಸ ಮಾಡುವ ಯುವ ರೈತರಿಗೆ ಜನರು ಹೆಣ್ಣು ಕೊಡ್ತಿಲ್ಲ. ಕೂಡಲೇ ಸರ್ಕಾರದಿಂದ ರೈತರಿಗೆ ಈಗಿರುವ ಭಾಗ್ಯಯೋಜನೆ ಜೊತೆಗೆ “ಕನ್ಯಭಾಗ್ಯ” ಯೋಜನೆ ಜಾರಿಗೊಳಿಸಿ ನಮ್ಮ ರೈತ ಮಕ್ಕಳಿಗೆ
ಮದುವೆ ಮಾಡಿಸಿ ಎಂದು ಮನವಿ ಮಾಡಿದ್ದಾರೆ.

ರೈತ ದೇಶದ ಬೆನ್ನೆಲುಬು ಅಂತೆಲ್ಲಾ ಕರೆಯುತ್ತಾರೆ. ಜೊತೆಗೆ ಎಲ್ಲಿಯೇ ಹೋದರೂ ರೈತರನ್ನು ಪೂಜ್ಯ ಭಾವನೆಯಲ್ಲಿ ನೋಡ್ತಾರೆ. ಆದರೆ ನಮಗೆ, ಹೊಗಳಿಕೆ ಮಾತುಗಳು ಬೇಡ. ಸಾಲ, ಸೋಲ ಮಾಡಿ ಕೃಷಿ ಕೆಲಸ ಮಾಡುತ್ತಿದ್ದು, ಮಳೆ-ಬೆಳೆ ಕೈಕೊಟ್ಟು ನಷ್ಟ ಅನುಭವಿಸುವುದು ಸಾಮಾನ್ಯವಾಗಿದೆ. ಆದರೆ, ಈಗ ರೈತರಿಗೆ ಹೆಣ್ಣು ಸಿಗುತ್ತಿಲ್ಲ. ಆದ್ದರಿಂದ ಸರಕಾರದ ಗ್ಯಾರಂಟಿ ಯೋಜನೆಗಳ ಜೊತೆಗೆ ಕನ್ಯಾಭಾಗ್ಯ ಯೋಜನೆ ಜಾರಿಗೆ ತರಬೇಕು ಎಂದು ರೈತರ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ ಒಂದು‌ ಕಡೆ ಮಳೆರಾಯನ ಕಣ್ಣಾಮುಚ್ಚಾಲೆ ಆಟ. ಇನ್ನೊಂದು ಕಡೆ ಸಾಲದ ಹೊರೆ ಹೊತ್ತುಕೊಂಡೇ ರೈತರು ಜೀವನ ನಡೆಸ್ತಿರೋದು ಹೊಸ ಸಂಗತಿ ಏನಲ್ಲ. ಮುಂಗಾರು ಕೈ ಕೊಟ್ಟು ರೈತರು ಆತ್ಮಹತ್ಯೆ ಹತ್ಯೆ ಹಾದಿ ಹಿಡಿದಿರುವಾಗಲೇ ರೈತರಿಗೆ ಮತ್ತೊಂದು ಶಾಕ್ ಎದುರಾಗಿದೆ. ರೈತರಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ!.ಹೊಲದಲ್ಲಿ ಬೆವರು ಸುರಿಸಿ ದುಡಿಯೋ ಯುವ ರೈತರಿಗೆ ಹೆಣ್ಣೇ ಕೊಡುತ್ತಿಲ್ಲ. ಆದ್ದರಿಂದ ರಾಜ್ಯದಲ್ಲಿ ರೈತ ಯವಕರಿಗಾಗಿ ಕನ್ಯಾಭಾಗ್ಯ ಯೋಜನೆ ಜಾರಿ ಮಾಡಿಎಂಬ ಪತ್ರ ಬರೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular