ಶಿರಾ ; ತಾಲೂಕಿನ ಬುಕ್ಕಾ ಹೋಬಳಿಯ ಹೊನ್ನೇನ ಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ತಡೆಯಲು ಒತ್ತಾಯಿಸಿ ಗ್ರಾಮಸ್ಥರು ನಗರದ ಅಡಳಿತ ಸೌದ ಮುಂದೆ ಪ್ರತಿಭಟಿಸಿದರು.
ಈ ಗ್ರಾಮದಲ್ಲಿ ಸಣ್ಣ ರೈತರು ಹಾಗೂ ಕೂಲಿ ಕಾರ್ಮಿಕ ಕುಟುಂಬಗಳು ಹೆಚ್ಚಿವೆ. ಕೆಲ ಪ್ರಭಾವಿಗಳು ಹಗಲು-ರಾತ್ರಿ ಎನ್ನದೇ ಅಕ್ರಮ ಮದ್ಯ ಮಾರಾಟ ನಡೆಸುತ್ತಿದ್ದಾರೆ. ಇದರಿಂದ ಬಡ ಕುಟುಂಬಗಳು ಬೀದಿಗೆ ಬರುತ್ತಿವೆ. ಯುವಕರು ಮದ್ಯ ವ್ಯಸನಿಗಳಾಗುತ್ತಿದ್ದಾರೆ.
ಅಕ್ರಮ ಮದ್ಯ ಮಾರಾಟ ದಿನೇ ದಿನೆ ಹೆಚ್ಚುತ್ತಿದ್ದು, ಗ್ರಾಮಗಳಲ್ಲಿ ಗಲಾಟೆಗಳು ನಡೆಯುತ್ತಿವೆ. ಗ್ರಾಮದ ಶಾಲೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗಿದೆ ಮತ್ತು ಶಾಲೆಯ ಆವರಣ ಮದ್ಯ ವ್ಯಸನಿಗಳ ಅಡ್ಡೆಯಾಗಿದೆ ಪ್ರತಿದಿನ ರಾತ್ರಿ ಮದ್ಯ ಕುಡಿದು ಬಿಸಾಡಿದನ್ನು ಸ್ವಚ್ಛ ಮಾಡುವುದು ಮಕ್ಕಳ ಕೆಲಸವೇ ಎಂದು ಗ್ರಾಮಸ್ಥರು ಆರೋಪಿಸಿದರು.
ಗ್ರಾಮದಲ್ಲಿ ಅಕ್ರಮ ಮದ್ಯ ತಡೆಯದಿದ್ದರೆ ಅಬಕಾರಿ ಇಲಾಖೆ ಕಚೇರಿಗೆ ಬೀಗಜಡಿಯಲಾಗುವುದು ನಾವು ಮಾಹಿತಿ ನೀಡಿ ದರೆ ಮಾಹಿತಿ ಇಲಾಖೆಯಲ್ಲಿ ಸೋರಿಕೆ ಯಾಗುತ್ತಿದೆ ಹಾಗೂ ನೆಪಮಾತ್ರಕ್ಕೆ ತಾಪಸನೆ ಮಾಡುವ ಮೂಲಕ ಮಾರಾಟಗಾರಿಗೆ ಕುಮಕ್ಕು ಇಲಾಖೆ ನೀಡುತ್ತಿದೆಎಂದು ಪ್ರತಿಭಟನಾಕಾರರು ಆರೋಪಿಸಿ ಶಿರಾ ತಹಶಿಲ್ದಾರಿಗೆ ಮನವಿ ಸಲ್ಲಿಸಿದರು.


