Thursday, March 12, 2026
Flats for sale
Homeರಾಜ್ಯಶಿಗ್ಗಾಂವಿ : ಸಾಮೂಹಿಕ ನಾಯಕತ್ವದಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ.

ಶಿಗ್ಗಾಂವಿ : ಸಾಮೂಹಿಕ ನಾಯಕತ್ವದಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ.

ಶಿಗ್ಗಾಂವಿ : ಶಿಗ್ಗಾಂವಿ ,ಹಾನಗಲ್ ಮತ್ತು ಬ್ಯಾಡಗಿ ತಾಲೂಕುಗಳನ್ನು ಬರಗಾಲ ಪ್ರದೇಶಗಳನ್ನಾಗಿ ಘೋಷಣೆ ಮಾಡಬೇಕು ಎಂದು ಗುರುವಾರ ತಾಲ್ಲೂಕು ಆಡಳಿತದ ಭವನದ ಆವರಣದಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸಿದರು ಜಿಲ್ಲಾಧಿಕಾರಿ ಬರಬೇಕು ಆದಷ್ಟು ಬೇಗ ಮೂರು ತಾಲ್ಲೂಕುನ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿ ಎಂದು ಧರಣಿ ನಡೆಸಿದರು.

ಕಬ್ಬು ಬೆಳೆಯ ಬೆಳೆ ವಿಮೆ ಮತ್ತು ಬೆಳೆ ಹಾನಿ ವ್ಯಾಪ್ತಿಗೆ ಸೇರಿಸುವುದು. 2023-24 ನೇ ಸಾಲಿನ ಮುಂಗಾರು ಹಂಗಾಮಿನ 25% ಬೆಳೆ ವಿಮೆ ಆದಷ್ಟು ಬೇಗ ಒದಗಿಸುವುದ. 2022-23 ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ವಿಮೆನ್ನು ರೈತರ ಖಾತೆಗಳಿಗೆ ಜಮಾ ಮಡುವುದು ಶಿಗ್ಗಾಂವಿ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವುದು. ಸ್ಪೀಂಕ್ಲರ್ ಮತ್ತು ಪೈಪ್‌ ಮತ್ತು ಜೆಟ್‌ಗಳನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ರೈತರಿಗೆ ಒದಗಿಸುವುದು.ಬರಗಾಲ ಪೀಡಿತ ತಾಲೂಕಿನ ಎಲ್ಲ ರೈತರಿಗೆ ಅವರ ಖಾತೆಗೆ ಹಣ ಜಮಾ ಮಡುವುದು.ತಾಲೂಕಿನ ರೈತ ಹೈನುಗಾರರ ಕಳೆದ 6 ತಿಂಗಳ ಹಾಲಿನ ಸಹಾಯಧನ ಬಿಡುಗಡೆ ಈ ಕೂಡಲೆ ಮಾಡುವುದು.ರೈತರ ರಾಷ್ಟ್ರೀಕೃತ ಬಾಂಕ್ಯ ಮತ್ತು ಸಹಕಾರಿ ಸಂಘಗಳಲ್ಲಿನ ಬೆಳೆ ಸಾಲ ಮನ್ನಾ ಮಾಡುವುದು.
ರೈತರ ಹೊಲಗಳ ಪಂಪ್‌ ಸೆಟ್‌ ಗಳಿಗೆ ಹಗಲಿನಲ್ಲಿ ಸರಿಯಾಗಿ 7 ತಾಸು ವಿದ್ಯುತ್ ಒದಗಿಸುವುದು. ಈಗಿನ ರಿಲಾಯನ್ಸ್ ಬೆಳೆ ವಿಮೆ ಕಂಪನಿಯ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುವ ಕುರಿತು 150 ದಿನಗಳನ್ನು ಪೂರೈಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಶಿಗ್ಗಾಂವಿ ಹಾನಗಲ್ ಮತ್ತು ಮತ್ತು ಬ್ಯಾಡಗಿ ತಾಲೂಕುಗಳ ರೈತ ಸಂಘಟನೆಗಳು ಹಾಗೂ ಕನ್ನಡ ಪರ ಹೋರಾಟಗಾರರು. ಕರ್ನಾಟಕ ರಾಜ್ಯ ರೈತ ಸಂಘ. ಹಾಗೂ ಹಸಿರು ಸೇನೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ. ಮಾನವ ಹಕ್ಕು ಆಯೋಗ ಬ್ರಷ್ಟಾಚಾರ ನಿರ್ಮೂಲನಾ ಸಮಿತಿ. ಕರ್ನಾಟಕ ರಾಜ್ಯ ರೈತ ಸಂಘ, ಜಯ ಕರ್ನಾಟಕ ಸಂಘಟನೆ. ಕರ್ನಾಟಕ ರಕ್ಷಣಾ ವೇದಿಕ, ಯುವ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಶಿಗ್ಗಾಂವಿ ತಾಲೂಕಿನ ಸಮಸ್ತ ರೈತ ಮುಖಂಡರು ಮತ್ತು ಕೂಲಿ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಯಲ್ಲಿ ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular