ವಿಟ್ಲ : ಪರಿಯಾಲತಡ್ಕ-ಸರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನವೊಂದು ಪಲ್ಟಿಯಾಗಿ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯೊಳಗೆ ಮಲಗಿದ್ದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಿಗ್ಗೆ ಜುಲೈ 14 ರಂದು ನಡೆದಿದೆ. ಪೊಲೀಸರು ಮತ್ತು ತುರ್ತು ಸೇವಾ ವಾಹನಗಳು ಸ್ಥಳದಲ್ಲಿದ್ದು, ಮಹಿಳೆಯನ್ನು ಮನೆಯಿಂದ ಹೊರತರಲು ಪ್ರಯತ್ನಿಸುತ್ತಿವೆ. ವಾಹನವನ್ನು ಮೇಲೆತ್ತಲು ಕ್ರೇನ್ ಸಹ ಕರೆಸಲಾಗಿದೆ.


