ವಿಟ್ಲ : ಕರ್ಣಾಟಕ ಬ್ಯಾಂಕ್ ಕಿಟಕಿ ಮೂಲಕ ಒಳ ನುಸುಳಿ ಕೋಟ್ಯಾಂತರ ಮೌಲ್ಯದ ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ ನಾಲ್ಕು ಮಂದಿ ಆರೋಪಿಗಳ ಪೈಕಿ ಮೂವರನ್ನು ಸೋಮವಾರ ಸ್ಥಳ ಮಹಜರಿಗೆ ಅಡ್ಯನಡ್ಕ ಪೊಲೀಸರು ಕರೆದುಕೊಂಡು ಬಂಧಿಸಿದ್ದಾರೆ.
ಬ್ರೀಝಾ ಕಾರಿನ ಮೂಲಕ ಆಗಮಿಸಿದ ಕಳ್ಳರು ಬ್ಯಾಂಕ್ ಕಿಟಕಿಯ ಸರಳು ತುಂಡರಿಸಿ, ಸೇಪ್ ಲಾಕರ್ ಬಾಗಿಲನ್ನು ಗ್ಯಾಸ್ ಕಟ್ಟರ್ ಮೂಲಕ ಕೊರೆದು ಲಾಕರ್ ನಲ್ಲಿದ್ದ ನಗದು ಹಾಗೂ ಚಿನ್ನಾಭರಣವನ್ನು ದೋಚಿದ್ದರು. ಆ ಬಳಿಕ ನಾಲ್ಕು ಮಾಡಿಕೊಂಡ ಕಳ್ಳರು ಒಂದು ಪಾಲನ್ನು ಬಾಯಾರಿನ ಪೊಸಡಿ ಗುಂಪೆ ಗುಡ್ಡದ ತಪ್ಪಲಿನ ಸಂಜಂಕಿಲ ಸಮೀಪ ನಿರ್ಜನ ಪ್ರದೇಶದಲ್ಲಿರುವ ಆಟದ ಮೈದಾನವೊಂದರಲ್ಲಿ ಇದನ್ನು ಅಡಗಸಿಟ್ಟಿರುವ ವಿಚಾರವನ್ನು ವಿಚಾರಣೆ ವೇಳೆ ಬಹಿರಂಗ ಪಡಿಸಿದ್ದರು.
ಬಂಧಿತರನ್ನು ಬಂಟ್ವಾಳ ಗೂಡಿನ ಬಳಿ ನಿವಾಸಿ ಮಹಮ್ಮದ್ ರಫೀಕ್ ರಫೀಕ್,ಮಂಜೇಶ್ವರ ತಾಲೂಕಿನ ಮೊಗ್ರಾಳು ಗ್ರಾಮದ ಇಬ್ರಾಹಿಂ ಕಲಂದರ್ ಹಾಗೂ , ಮಂಜೇಶ್ವರದ ಬಾಯಾರು ಗ್ರಾಮದ ದಯಾನಂದ ಎಸ್ ಎಂದು ತಿಳಿದುಬಂದಿದೆ.
ಕೆಲವು ವರ್ಷಗಳಿಂದ ವೆಲ್ಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ ಸೇಪ್ ಲಾಕರ್ ತುಂಡರಿಸಲು ಸಹಕರಿಸಿದ್ದು, ಕಾಸರಗೋಡು ಮೂಲದ ವಿವಿಧ ಪ್ರಕರಣದಲ್ಲಿ ಆರೋಪಿಗಳಾಗಿರುವವರು ಎಂದು ತನಿಖೆಯಿಂದ ತಿಳಿದು ಬಂದಿದೆ.


