ವಾಷಿಂಗ್ಟನ್ : ಜಗತ್ತಿನಾದ್ಯಂತ ಆರ್ಥಿಕ ಹಿಂಜರಿತ ಹಾಗೂ ವ್ಯಾಪಾರ ಯುದ್ಧಕ್ಕೆ ಕಾರಣವಾಗಿರುವ ಅಮೆರಿಕದ ಸುಂಕ ನೀತಿ ವಿಚಾರದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಆಡಳಿತದ ಸಲಹೆಗಾರ ಎಲಾನ್ ಮಸ್ಕ್ ಜೊತೆಗೂ ಸಹಮತ ಹೊಂದಿಲ್ಲ. ಚೀನಾ ಮೇಲೆ ಹೊಸದಾಗಿ ಘೋಷಿಸಿದ ಸುಂಕ ರದ್ದು ಮಾಡುವಂತೆ ಮಸ್ಕ್ ಅವರು ಟ್ರಂಪ್‌ಗೆ ವೈಯಕ್ತಿಕವಾಗಿ ಮನವಿ ಮಾಡಿದರೂ ಅದು ಪ್ರಯೋಜನವಾಗಿಲ್ಲ. ಚೀನಾದಿಂದ ಆಮದಾಗುವ ವಸ್ತುಗಳ ಮೇಲಿನ ಸುಂಕವನ್ನು ಶೇ.50೦ಕ್ಕೆ ಹೆಚ್ಚಿಸುವುದಾಗಿ ಟ್ರಂಪ್ ಕಳೆದ ಸೋಮವಾರ ಬೆದರಿಕೆ ಹಾಕಿದ ನಂತರ ಮಸ್ಕ್ ಈ ಬಗ್ಗೆ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದ್ದರು. ಟ್ರಂಪ್ ಅವರೊಂದಿಗೆ ನೇರವಾಗಿ ಮಾತುಕತೆ ನಡೆಸಿ ಸುಂಕ ತಗ್ಗಿಸುವಂತೆ ಅವರು ಮನವಿ ಮಾಡಿದರೂ ಇಲ್ಲಿಯವರೆಗೆ ಯಶಸ್ಸನ್ನು ತಂದುಕೊಟ್ಟಿಲ್ಲ ಎಂದು ತಿಳಿದಿದೆ.
ಈ ಮಧ್ಯೆ ಅಂತಾರಾಷ್ಟ್ರೀಯ ವ್ಯಾಪಾರ ಸಹಕಾರವು ಆರ್ಥಿಕತೆಗೆ ಹೇಗೆ ಉತ್ತಮ ಎಂಬುದನ್ನು ದಿವಂಗತ ಅರ್ಥಶಾಸ್ತçಜ್ಞ ಮಿಲ್ಟನ್ ಫ್ರೀಡ್‌ಮನ್ ವಿವರಿಸಿದ್ದ ವಿಡಿಯೋವನ್ನೂ ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ಟ್ರಂಪ್ ಅವರ ಸುಂಕ ನೀತಿಗೆ ತಮ್ಮ ಭಿನ್ನಾಭಿಪ್ರಾಯ ಇರುವುದನ್ನು ಮಸ್ಕ್ ಸೂಕ್ಷö್ಮವಾಗಿ ಬಹಿರಂಗಪಡಿಸಿದರು. ಟ್ರಂಪ್ ಸುಂಕ ನೀತಿ ಜಾರಿಗೆ ಬರುವ ಮೊದಲು ಶನಿವಾರದಂದು ಇಟಲಿಯ ಉಪಪ್ರಧಾನಿ ಮ್ಯಾಟಿಯೋ ಸಾಲ್ವಿನಿ ಜೊತೆ ಮಸ್ಕ್ ವರ್ಚುವಲ್ ಸಂವಾದ ನಡೆಸಿ, ಅಮೆರಿಕ ಮತ್ತು ಯುರೋಪ್ ಮಧ್ಯೆ ಶೂನ್ಯ ಸುಂಕ ಪರಿಸ್ಥಿತಿ ಬಯಸುವುದಾಗಿ ಹೇಳಿದರು. ಇಲೆಕ್ಟಾçನಿಕ್ ವಾಹನಗಳ ತಯಾರಕನಾದ ಮಸ್ಕ್ ಅವರು ಟ್ರಂಪ್ ಅವರ ಸುಂಕನೀತಿಯನ್ನು ಬಹಳ ಹಿಂದಿನಿಂದಲೂ ವಿರೋಧಿಸುತ್ತಾ ಬಂದಿದ್ದಾರೆ.