ಲಿಂಗಸುಗೂರು : ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ನರಳುತ್ತಿರುವುದು ಒಂದೆಡೆಯಾದರೆ ತಾಲೂಕಿನ ವಿವಿಧ ಶಾಲೆಗಳ 278 ಶಾಲಾ ಕೊಠಡಿಗಳು ಶಿಥಿಲಾಸ್ಥೆಯಲ್ಲಿವೆ.
ಇನ್ನೊಂದು ಕಡೆ ಶಾಸಕರ ಮನೆ ಮತ್ತು ಕಚೇರಿಯಿಂದ ಕೆಲವೇ ಮೀಟರ್ ಅಂತರದಲ್ಲಿರುವ ಲಿಂಗಸ್ಗೂರು ಪಟ್ಟಣದ ಶಾಸಕರ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಆವರಣ ಸಂಪೂರ್ಣ ಸ್ವಿಮ್ಮಿಂಗ್ ಪೂಲ್ ಆಗಿ ಪರಿವರ್ತನೆಯಾಗಿದೆ. ಹಾಗೂ ಐದನಾಳ ಸರ್ಕಾರಿ ಶಾಲೆಯೂ ಸಹ ಇದೆ ರೀತಿ ಇದೆ ಶಾಸಕ ಮಾನಪ್ಪ ವಜ್ಜಲ್ ಸರ್ಕಾರಿ ಶಾಲೆ ಮತ್ತು ಕಾಲೇಜುಗಳ ಕಟ್ಟಡ ಮತ್ತು ಅವುಗಳ ಮೂಲ ಸೌಕರ್ಯಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿಸಿದ್ದಾರೆ .
ಶಾಸಕರ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಆವರಣ ಸಂಪೂರ್ಣ ಸ್ವಿಮ್ಮಿಂಗ್ ಪೂಲ್ ಆಗಿ ಪರಿವರ್ತನೆಯಾದ ಪರಿಣಾಮ ಮಕ್ಕಳು ಇದರಲ್ಲಿ ಈಜು ಮಾಡಿಕೊಂಡು ಕ್ಲಾಸ್ ರೂಮ್ ಗಳಿಗೆ ತೆರಳಬೇಕಾದ ಪರಿಸ್ಥಿತಿ ಉಂಟಾಗಿದೆ. ಶಾಸಕರಿಗೆ ಸರ್ಕಾರಿ ಶಾಲೆಗಳ ಬಗ್ಗೆ ಈ ಅಸಡ್ಡೆ ತೋರದೇ ಸರ್ಕಾರಿ ಶಾಲೆಗಳ ಬಲವರ್ಧನೆ ಗೆ ಮುಂದಾಗದಿದ್ದರೆ ಶಾಸಕರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ. ವೀರಾಪುರ ಎಚ್ಚರಿಸಿದ್ದಾರೆ.


