Friday, March 13, 2026
Flats for sale
Homeದೇಶಲಖನೌ : ಕರ್ನಾಟಕದ ಶಿಲ್ಪಿಗಳು ತಯಾರಿಸಿದ ಮೂರ್ತಿ ರಾಮಮಂದಿರದಲ್ಲಿ ಪ್ರತಿಷ್ಠಾಪನೆ.

ಲಖನೌ : ಕರ್ನಾಟಕದ ಶಿಲ್ಪಿಗಳು ತಯಾರಿಸಿದ ಮೂರ್ತಿ ರಾಮಮಂದಿರದಲ್ಲಿ ಪ್ರತಿಷ್ಠಾಪನೆ.

ಲಖನೌ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಈ ತಿಂಗಳ 22 ರಂದು ರಾಮ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಿರುವ ರಾಮ್ ಲಲ್ಲಾ ವಿಗ್ರಹದ ಮೈಬಣ್ಣ ಶ್ಯಾಮಲ ವರ್ಣದಲ್ಲಿದೆ. ಕರ್ನಾಟಕದ ಶಿಲ್ಪಿಗಳು ತಯಾರು ಮಾಡಿದ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುವುದು ಎಂದು ದೇವಸ್ಥಾನದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಬಹಿರಂಗಪಡಿಸಿದ್ದಾರೆ.

ಕರ್ನಾಟಕದ ಶಿಲ್ಪಿಗಳಾದ ಅರುಣ್ ಯೋಗಿರಾಜ್ ಮತ್ತು ಗಣೇಶ್ ಭಟ್ಅವರು ತಯಾರಿಸಿದ ರಾಮನ ವಿಗ್ರಹಗಳಲ್ಲಿ ಯಾವುದಾದರು ಒಂದನ್ನು ಪ್ರತಿಷ್ಠಾಪನೆ ಮಾಡಲಾಗುವುದು ಎಂದು ವಿಶ್ವಹಿಂದೂ ಪರಿಷತ್ ಉಪಾಧ್ಯಕ್ಷರೂ ಆಗಿರುವ ರಾಯ್ ಹೇಳಿದ್ದಾರೆ.

ಡಿಸೆಂಬರ್ ೨೯ ರಂದು, ಎಲ್ಲಾ ೧೧ ಟ್ರಸ್ಟ್ ಸದಸ್ಯರು ಅಂತಿಮವಾಗಿ ಆಯ್ಕೆಯಾಗಿದ್ದ ಮೂರು ವಿಗ್ರಗಳಲ್ಲಿ ಒಂದನ್ನು ಆಯ್ಕೆ ಮಾಡಲು ಮತ ಚಲಾಯಿಸಿದ್ದರು ಸತ್ಯನಾರಾಯಣ ಪಾಂಡೆ ಅವರು ರಾಜಸ್ಥಾನದಿಂದ ಬಿಳಿ ಮಕ್ರಾನ ಮಾರ್ಬಲ್‌ನಿಂದ ರಚಿಸಿದ್ದರೆ, ಇನ್ನೆರಡು ಡಾರ್ಕ್ ಕರ್ನಾಟಕ ಗ್ರಾನೈಟ್ ಕಲ್ಲುಗಳಿಂದ ರಚಿಸಲಾಗಿದೆ ಆಯ್ಕೆ ಮಾಡಿದ ವಿಗ್ರಹದಲ್ಲಿ ಬಳಸುವ ಕಲ್ಲು ನೀರು ಅಥವಾ ಹಾಲಿನಿಂದ ಪ್ರಭಾವಿತವಾಗುವುದಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದ ಶಿಲ್ಪಿಗಳಾದ ಅರುಣ್ ಯೋಗಿರಾಜ್ ಅಥವಾ ಗಣೇಶ್ ಭಟ್ ಅವರ ರಚನೆ ಮೂರ್ತಿಗಳಲ್ಲಿ ಒಂದನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ.ಆಯ್ಕೆ ಮಾಡಿದ ವಿಗ್ರಹವನ್ನು ಗರ್ಭಗುಡಿಯಲ್ಲಿ ಇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಕರ್ನಾಟಕ ವಿಗ್ರಹಗಳನ್ನು “ಶ್ಯಾಮ ಶಿಲೆ -ಕಪ್ಪು ಕಲ್ಲುಗಳು ನಿಂದ ಮಾಡಲಾಗಿದೆ. ಒಂದು ಬೂದು ಮತ್ತು ನೀಲಿ ವರ್ಣಗಳನ್ನು ಹೊಂದಿದ್ದರೆ, ಇನ್ನೊAದು ಗಾಢವಾಗಿರುತ್ತದೆ.ಆಯ್ಕೆ ಮಾಡಿದ ವಿಗ್ರಹದಲ್ಲಿ ಬಳಸುವ ಕಲ್ಲು ನೀರು, ಹಾಲು ಮತ್ತು ಇತರ ನೈವೇದ್ಯಗಳಿಂದ ಪ್ರಭಾವಿತವಾಗುವುದಿಲ್ಲ. ಅಲ್ಲದೆ, ಯಾರಾದರೂ ಆ ನೀರು ಅಥವಾ ಹಾಲನ್ನು ಸೇವಿಸಿದರೆ, ಅದು ವ್ಯಕ್ತಿಯ ಮೇಲೆ ಯಾವುದೇ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ ಎಂದಿದ್ದಾರೆ.

ಕಳೆದ ೩೦೦ ವರ್ಷಗಳಲ್ಲಿ ಉತ್ತರ ಭಾರತದಲ್ಲಿ ಅಂತಹ ಯಾವುದೇ ದೇವಾಲಯ ನಿರ್ಮಿಸಲಾಗಿಲ್ಲ.ನಿರ್ಮಾಣ ಎಂಜಿನಿಯರ್‌ಗಳ ಪ್ರಕಾರ. ದೇವಾಲಯದ ಕಲ್ಲುಗಳ ವಯಸ್ಸು ೧,೦೦೦ ವರ್ಷಗಳಾದರೂ, ಸೂರ್ಯನ ಬೆಳಕು, ಗಾಳಿ ಮತ್ತು ನೀರು ಅದರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅವರು ಟೀಕಿಸಿದರು, ಕೆಳಗೆ ಗ್ರಾನೈಟ್ ಪದರವನ್ನು ಅಳವಡಿಸಲಾಗಿದೆ, ತೇವಾಂಶವನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ ಎಂದಿದ್ದಾರೆ.

ಜನವರಿ ೧೬ರಂದು ಆರAಭ ಪ್ರಾಣ ಪ್ರತಿಷ್ಠಾ ಸಮಾರಂಭ ಜನವರಿ ೧೬ ರಿಂದ ಪ್ರಾರಂಭವಾಗುತ್ತವೆ ಮತ್ತು ಅಯೋಧ್ಯೆಯ ಸುತ್ತ ನಗರ ಯಾತ್ರೆಯ ರಥದ ಪ್ರವಾಸದ ನಂತರ ಜನವರಿ ೧೮ ರಂದು ದೇವಾಲಯದ ಗರ್ಭಗುಡಿಯಲ್ಲಿ ಶಾಶ್ವತವಾಗಿ ವಿಗ್ರಹ ಇರಿಸಲಾಗುತ್ತದೆ. ಜನವರಿ ೨೨ ರಂದು ಇದು ಔಪಚಾರಿಕವಾಗಿ ಅಯೋಧ್ಯೆಯ ಪ್ರಧಾನ ದೇವತೆಯಾಗಿ ಅಧಿಕಾರ ವಹಿಸಿಕೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ಚಂಪತ್ ರೈ ತಿಳಿಸಿದ್ದಾರೆ.

ಪ್ರತಿ ವರ್ಷ ಚೈತ್ರ ಶುಕ್ಲ ನವಮಿ ರಾಮ ನವಮಿ ಯಂದು ಸೂರ್ಯನ ಕಿರಣಗಳು ಭಗವಂತನ ಹಣೆಯ ಮೇಲೆ ಸೂರ್ಯ ತಿಲಕ ಹಚ್ಚುತ್ತವೆ. ಇತರೆ ಎರಡು ವಿಗ್ರಹಗಳಿಗೂ ಸರಿಯಾದ ಗೌರವ ನೀಡಲಾಗುವುದು ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular