ರಾಯಚೂರು : ರಸ್ತೆ ಬದಿ ಮೂವರು ಅಧಿಕಾರಿಗಳು ಮಾತಾಡುತ್ತ ನಿಂತಿದ್ದ ಸಂದರ್ಭದಲ್ಲಿ ಹಲಕನ ನಿಯಂತ್ರಣ ತಪ್ಪಿ ಹೊಟ್ಟು ತುಂಬಿದ್ದ ಲಾರಿ ಪಲ್ಟಿಯಾಗಿ, ಮೂವರು ಅಧಿಕಾರಿಗಳ ಮೇಲೆ ಬಿದ್ದು ಮೂವರು ಮೃತಪಟ್ಟ ಘಟನೆ ರಾಯಚೂರುಜಿಲ್ಲೆಯ ಸಿಂಧನೂರಿನ ಡಾಲರ್ಸ್ ಕಾಲೋನಿಯ ಬಳಿ ನಡೆದಿದೆ.
ಮೃತಪಟ್ಟ ಅಧಿಕಾರಿಗಳನ್ನು ಮಲ್ಲಿಕಾರ್ಜುನ (29), ಶಿವರಾಜು (28), ಮೆಹಬೂಬ್ (30) ಎಂದು ತಿಳಿದುಬಂದಿದೆ.ಲೋಕೋಪಯೋಗಿ ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ಗಳಾಗಿದ್ದ ಮಲ್ಲಿಕಾರ್ಜುನ, ಶಿವರಾಜು ಮತ್ತು ಕಂಪ್ಯೂಟರ್ ಆಪರೇಟರ್ ಆಗಿದ್ದ ಮೆಹಬೂಬ್ ಸೋಮವಾರ ರಾತ್ರಿ ಕೆನಲ್ ಡ್ಯೂಟಿ ಮುಗಿಸಿಕೊಂಡು ಮನೆಗೆ ಹೊರಟಿದ್ದರು. ಮೂವರು ಅಧಿಕಾರಿಗಳ ಮೇಲೆ ಬಿದ್ದಿದೆ. ಲಾರಿ ಕೆಳಗೆ ಸಿಲುಕಿ ಮಲ್ಲಿಕಾರ್ಜುನ, ಶಿವರಾಜು, ಮೆಹಬೂಬ್ ಮೃತಪಟ್ಟಿದ್ದು ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.