Saturday, March 14, 2026
Flats for sale
Homeರಾಜ್ಯರಾಮನಗರ : ಮಾಜಿ ಡಾನ್, ಭೂಗತ ಪಾತಕಿ ಮುತ್ತಪ್ಪ ರೈ ಮಗನ ಮೇಲೆ ಶೂಟೌಟ್,ಆಸ್ಪತ್ರೆಗೆ ದಾಖಲು…!

ರಾಮನಗರ : ಮಾಜಿ ಡಾನ್, ಭೂಗತ ಪಾತಕಿ ಮುತ್ತಪ್ಪ ರೈ ಮಗನ ಮೇಲೆ ಶೂಟೌಟ್,ಆಸ್ಪತ್ರೆಗೆ ದಾಖಲು…!

ರಾಮನಗರ : ಮುತ್ತಪ್ಪ ರೈ ಮಗನ ಮೇಲೆ ಶೂಟೌಟ್ ನಡೆದ ಘಟನೆ ವರದಿಯಾಗಿದೆ. ಬಿಡದಿಯಲ್ಲಿರುವ ಮುತ್ತಪ್ಪ ರೈ ನಿವಾಸ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಮಧ್ಯರಾತ್ರಿ 1:30 ರ ಸುಮಾರಿಗೆ ಶೂಟೌಟ್ ನಡೆದಿದೆ.

ಬಿಡದಿ ಮನೆ ಇಂದ ಬೆಂಗಳೂರಿಗೆ ಹೋಗ್ತಿದ್ದ ವೇಳೆ ರಿಕ್ಕಿ ರೈ ಮನೆ ಹೊರಗಡೆಯ ಕೌಂಪೌಡ್ ಬಳಿ ಡ್ರೈವರ್ ಹಾಗೂ ಗನ್ ಮ್ಯಾನ್ ಜೊತೆ ಫರ್ಚೂನರ್ ಕಾರ್ ನಲ್ಲಿ ಹೋಗ್ತಿದ್ದ ಸಮಯದಲ್ಲಿ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಬಿಡದಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಶಿಫ್ಟ್ ಮಾಡಲಾಗಿದೆ.

ಬಿಡದಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ, ಡಿವೈಎಸ್ಪಿ ಶ್ರೀನಿವಾಸ್ ಭೇಟಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular