Thursday, October 23, 2025
Flats for sale
Homeದೇಶರಾಜೌರಿ : ಗ್ರಾಮದಲ್ಲಿ ನಿಗೂಢ ಕಾಯಿಲೆ, 17 ಜನ ಬಲಿ..!

ರಾಜೌರಿ : ಗ್ರಾಮದಲ್ಲಿ ನಿಗೂಢ ಕಾಯಿಲೆ, 17 ಜನ ಬಲಿ..!

ರಾಜೌರಿ : ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಬಾದಲ್ ಗ್ರಾಮದಲ್ಲಿ ಜನರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈ ನಿಗೂಢ ಕಾಯಿಲೆಯಿಂದ ಒಂದು ತಿಂಗಳೊಳಗೆ 17 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಿನವರು ಮಕ್ಕಳು ಎನ್ನಲಾಗಿದೆ ಈ ಸಾವುಗಳ ನಿಗೂಢತೆ ಇನ್ನೂ ಬಗೆಹರಿದಿಲ್ಲ. ಆರೋಗ್ಯ ಇಲಾಖೆಯ ಹಲವು ತಂಡಗಳು ಈ ರೋಗ ಪತ್ತೆ ಕಾರ್ಯದಲ್ಲಿ ತೊಡಗಿವೆ.ಮಂಗಳವಾರ ಸಿಎಂ ಒಮರ್ ಅಬ್ದುಲ್ಲಾ ಅವರು ಆ ಪ್ರದೇಶವನ್ನು ಪರಿಶೀಲಿಸಿದ್ದಾರೆ. ನಂತರ ಅದನ್ನು ಕಂಟೈನ್‌ಮೆಂಟ್ ಝೋನ್ ಆಗಿ ಪರಿವರ್ತಿಸಲಾಗಿದೆ.

ಭಾರತೀಯ ನ್ಯಾಯಾಂಗ ಸಂಹಿತೆಯ ಸೆಕ್ಷನ್ 163 ರ ಅಡಿಯಲ್ಲಿ ಆದೇಶ ಹೊರಡಿಸಲಾಗಿದೆ ಮತ್ತು ಸಂತ್ರಸ್ತರ ಕುಟುAಬಗಳ ಮನೆಗಳನ್ನು ಸೀಲ್ ಮಾಡಲಾಗಿದೆ. ಮಂಗಳವಾರ ವ್ಯಕ್ತಿಯೊಬ್ಬರ ಅಸ್ವಸ್ಥಗೊಂಡಿದ್ದು, ಗ್ರಾಮಕ್ಕೆ ಪ್ರವೇಶ ಮತ್ತು ನಿರ್ಗಮನವನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಆಡಳಿತವು ಈ ನಿರ್ಧಾರ ಕೈಗೊಂಡಿದೆ. ವರದಿಗಳ ಪ್ರಕಾರ, ಈ ಸಾವುಗಳು ಡಿಸೆಂಬರ್ ೭ ಮತ್ತು ಡಿಸೆಂಬರ್ 19 ರ ನಡುವೆ ಸಂಭವಿಸಿವೆ.

ಇದನ್ನು ಪತ್ತೆಹಚ್ಚಲು ದೆಹಲಿ, ಪುಣೆ ಮತ್ತು ಚಂಡೀಗಢದ ವೈದ್ಯಕೀಯ ಪ್ರಯೋಗಾಲಯಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ನಿನ್ನೆ ಈ ಪ್ರದೇಶಕ್ಕೆ ಭೇಟಿ ನೀಡಿದ್ದ ಒಮರ್ ಅಬ್ದುಲ್ಲಾ, ಮೃತಪಟ್ಟವರ ದೇಹದಲ್ಲಿ ಯಾವುದೇ ರೀತಿಯ ಬ್ಯಾಕ್ಟೀರಿಯಾ ಅಥವಾ ವೈರಸ್ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.

ಈ ಜನರ ದೇಹದಲ್ಲಿ ನ್ಯೂರೋಟಾಕ್ಸಿನ್‌ಗಳು ಪತ್ತೆಯಾಗಿವೆ ಎಂದು ಎಸ್‌ಐಟಿ ಹೇಳಿದೆ.ಎಸ್‌ಐಟಿ, ಸ್ಥಳೀಯ ಆಡಳಿತ ಮತ್ತು ಆರೋಗ್ಯ ಇಲಾಖೆ ಈ ಸಾವುಗಳ ನಿಗೂಢ ಬೇಧಿಸುವಲ್ಲಿ ತೊಡಗಿವೆ. ಮೃತರ ಕುಟುಂಬಗಳು ಎಲ್ಲಿಗೆ ಹೋಗಿದ್ದರು, ಯಾರನ್ನು ಭೇಟಿಯಾದರು ಮತ್ತು ಈ ಅವಧಿಯಲ್ಲಿ ಏನಾದರೂ ಸೇವನೆ ಮಾಡಿದ್ದಾರೋ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular