ಯಾದಗಿರಿ : ದಲಿತ ಸಚಿವರ ರಹಸ್ಯ ಸಭೆ ವಿಚಾರ ಹಿನ್ನೆಲೆ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ಹೊರಹಾಕಿದ್ದು ಸಿದ್ದರಾಮಯ್ಯ ಅವರಿಂದ ದಲಿತರಿಗೆ ಅನ್ಯಾಯ ಆಗಿದೆ ಎಂದು ಹೇಳಿದ್ದಾರೆ. ದಲಿತರಿಗೆ ಅಧಿಕಾರ ಕೊಡಬೇಕು ಅನ್ನೋದು ಬಹುದಿನಗಳಿಂದ ಕಾಂಗ್ರೆಸ್ ನಲ್ಲಿ ನಡೆಯುತ್ತಿದೆ ಆದರೆ ಸಿದ್ದರಾಮಯ್ಯ ಪಕ್ಷ ಬಿಟ್ಟು ಕಾಂಗ್ರೆಸ್ ಬಂದಾಗಲೇ ದಲಿತರಿಗೆ ಅನ್ಯಾಯ ಆಗಿದೆ,ಆಗ ದಲಿತರು ಸಿಎಂ ಆಗಬೇಕಿತ್ತು ಆಗಿಲ್ಲ ಸಿದ್ದರಾಮಯ್ಯ ಅವರು ಆಗ ಕಿತ್ತುಕೊಂಡ್ರು ಈಗ ಅವಕಾಶವಿದೆ ಕೊಡೋದು ಬಿಡೋದು ಕಾಂಗ್ರೆಸ್ ಗೆ ಬಿಟ್ಟದ್ದು ಎಂದು ಯಾದಗಿರಿಯಲ್ಲಿ ಪರಿಷತ್ ವಿಪಕ್ಷ ನಾಯಕ ಛಲುವಾದಿ ನಾರಾಯಣಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
75 ವರ್ಷಗಳ ಕಾಲ ಕಾಂಗ್ರೆಸ್ ನವರು ದಲಿತರಿಗೆ ಜೈಲಿನಲ್ಲಿ ಇಟ್ಟುಕೊಂಡ ರೀತಿಯಲ್ಲಿ ಇಟ್ಟುಕೊಂಡಿದ್ರು ಕಾಂಗ್ರೆಸ್ ಅಲ್ಲದೇ ದಲಿತರನ್ನ ಸಿಎಂ ಯಾರು ಮಾಡಬೇಕು,ದಲಿತರಿಗೆ ಪದೇ ಪದೇ ವಂಚನೆ ಮಾಡುವ ಕೆಲಸ ಕಾಂಗ್ರೆಸ್ ಮಾಡಿದೆ.ಕಾಂಗ್ರೆಸ್ ಸದ್ಯ ಅವರು ತೋಡಿದ ಹಳ್ಳಕ್ಕೆ ಅವರೆ ಬಿದ್ದಿದ್ದಾರೆ ಮತ್ತೊಬ್ಬ ದಲಿತ ನಾಯಕರನ್ನ ಬೆಳೆಸಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.
ದೊಡ್ಡ ಆಲದ ಮರದ ಕೆಳಗೆ ಮತ್ತೊಂದು ಮರ ಬೆಳೆಯಲ್ಲ ಎನ್ನುವಂತಾಗಿದೆ ಇವರ ಪರಿಸ್ಥಿತಿ ದೇಶದಲ್ಲಿ ಕಾಂಗ್ರೆಸ್ ನ ಅತ್ಯುನ್ನತ ನಾಯಕ ಈ ಭಾಗದ ಮಲ್ಲಿಕಾರ್ಜುನ ಖರ್ಗೆ ಆದ್ರೆ ಖರ್ಗೆ ಈ ಭಾಗದವರಿಗೆ ಬೆಳೆಸಿಲ್ಲ ಎಂದ ಛಲುವಾದಿ ನಾರಾಯಣಸ್ವಾಮಿ ನೇರವಾಗಿ ಖರ್ಗೆ ವಿರುದ್ಧ ವಾಗ್ದಾಳಿಮಾಡಿದ್ದಾರೆ.


