Friday, March 13, 2026
Flats for sale
Homeರಾಜ್ಯಯಲ್ಲಾಪುರ : ಭೀಕರ ಅಪಘಾತ ಇಬ್ಬರು ಯುವಕರು ಸ್ಥಳದಲ್ಲೇ ಸಾವು.

ಯಲ್ಲಾಪುರ : ಭೀಕರ ಅಪಘಾತ ಇಬ್ಬರು ಯುವಕರು ಸ್ಥಳದಲ್ಲೇ ಸಾವು.

ಯಲ್ಲಾಪುರ : ಪಟ್ಟಣದ ಕೆಬಿ ರಸ್ತೆಯ ಶಾನಭಾಗ ಹೋಟೆಲ್‌ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನೊಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.

ಬೈಕ್‌ನಲ್ಲಿ ಟ್ರಿಪಲ್‌ ರೈಡಿಂಗ್‌ ಮಾಡುತ್ತಿದ್ದ ಸವಾರರು, ಹೋಟೆಲ್‌ ಮುಂಭಾಗ ಮುಂಬದಿ ಕಾರು ಒಮ್ಮೆಲೇ ರೈಟ್ ಟರ್ನ್ ತೆಗೆದ ಪರಿಣಾಮ ರಸ್ತೆ ಬದಿಯಲ್ಲಿ ನಿಲ್ಲಿಸಿಟ್ಟಿದ್ದ ಇನೋವಾ ಕಾರ್‌ ಗೆ ಹಿಂಭಾಗದಿಂದ ಬೈಕ್‌ ಸವಾರರು ವಿರುದ್ಧ ದಿಕ್ಕಿನಲ್ಲಿ ಬಂದು ಗುದ್ದಿದ್ದು, ಅಪಘಾತದ ಪರಿಣಾಮವಾಗಿ ಇಬ್ಬರು ಸ್ಥಳದಲ್ಲೇ ಸಾವನ್ನೋಪ್ಪಿದ್ದಾರೆ. ಇನ್ನೋರ್ವನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯಲಾಗಿದೆ.

ಮೃತ ಯುವಕರನ್ನು ತಾಲೂಕಿನ ಹುಣಶೆಟ್ಟಿಕೊಪ್ಪದ ರಾಜು ಹಾಗೂ ರಾಮನಕೊಪ್ಪದ ದರ್ಶನ ಭಂಡಾರಿ ಎಂದು ಗುರುತಿಸಲಾಗಿದ್ದು, ಇನ್ನೋರ್ವ ಸವಾರ ಜಾಬೀರ್‌ ಗಂಭೀರವಾಗಿ ಗಾಯಗೊಂಡಿರುತ್ತಾನೆ.

RELATED ARTICLES

LEAVE A REPLY

Please enter your comment!
Please enter your name here

Most Popular