ಯಲ್ಲಾಪುರ : ಹಸಿವು ಮುಕ್ತ ಕರ್ನಾಟಕ ಎಂದು ಕೊಚ್ಚುತ್ತಿರುವ ರಾಜಕಾರಣಿಗಳಿಗೆ ಇದೊಂದು ನಿದರ್ಶನ,ತಮ್ಮ ಯೋಜನೆಗಳು ಎಲ್ಲಿಯವರೆಗೆ ತಲುಪುತ್ತಿದೆಂದು ಇದೆ ಸಾಕ್ಷಿ. ಜೀವನದಲ್ಲಿನ ಸಂಕಷ್ಟಗಳಿAದ ಹೊತ್ತಿನ ಊಟಕ್ಕೂ ತೊಂದರೆಯಾಗಿದ್ದರಿAದ ಮನನೊಂದು ಬೆಂಕಿ ಹಚ್ಚಿಕೊಂಡು ಮಹಿಳೆಯೊಬ್ಬರು ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಯಲ್ಲಾಪುರ ತಾಲೂಕಿನ ಬೆಳ್ತಾರಗದ್ದೆಯಲ್ಲಿ ನಡೆದಿದೆ.
ಮೃತರನ್ನು ಬೆಳ್ತಾರಗದ್ದೆ ನಿವಾಸಿ ಲಕ್ಷ್ಮೀ ಮಹಾದೇವಿ ನಾಗೇಶ ಸಿದ್ದಿ (೪೮) ಎಂದು ಗುರುತಿಸಲಾಗಿದೆ. ಮೃತ ಲಕ್ಷ್ಮೀ ಮಹಾದೇವಿ ತನ್ನ ಪತಿಯಿಂದ ದೂರವಾಗಿ ಸೈಮನ್ ಎಂಬುವವರೊAದಿಗೆ ವಾಸವಾಗಿದ್ದಳು. ಇದರಿಂದ ಸಂಕಷ್ಟಕ್ಕೆ ಗುರಿಯಾಗಿದ್ದಳು. ಆದರೆ ಅನಾರೋಗ್ಯದಿಂದ ಬಳಲುತ್ತಿದ್ದ ಆಕೆಗೆ ದುಡಿಯಲು ಸಾಧ್ಯವಾಗುತ್ತಿರಲಿಲ್ಲ. ಅವಲಂಬಿತರ ಮನೆಗೆ ತನ್ನಿಂದ ಯಾವುದೇ ಆಹಾರ ಸಾಮಾನುಗಳನ್ನು ತಂದುಕೊಡಲು ಆಗದ ಬಗ್ಗೆ ನೊಂದಿದ್ದಳು. ಅಲ್ಲದೆ ಊಟಕ್ಕೂ ತೊಂದರೆಯಾಗುತ್ತಿರುವುದರಿAದ
ಮನನೊAದು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಆಕೆಯ ಮಗಳು ದೂರಿನಲ್ಲಿ ತಿಳಿಸಿದ್ದಾರೆ.
ಆಗಸ್ಟ್ ೨ ರಂದು ರಾತ್ರಿ ಸುಮಾರು 11 ಗಂಟೆಗೆ ಅವರು ಸೀಮೆಎಣ್ಣೆ ಸುರಿದುಕೊಂಡು ಬೆAಕಿ ಹಚ್ಚಿಕೊಂಡಿದ್ದಳು. ಕೂಡಲೇ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆಗೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದ ಅವರು, ಆಗಸ್ಟ್ ೫ ರಂದು ರಾತ್ರಿ ೧೨ ಗಂಟೆಗೆ ಸಾವನ್ನಪ್ಪಿದ್ದಾಳೆ.
ತಾಯಿ ತಂದೆಯಿAದ ದೂರಾದ ಬಳಿಕ ನಮ್ಮೊಂದಿಗೆ ಇರುವAತೆ ಕರೆದರೂ ಬಂದಿರಲಿಲ್ಲ. ಅನಾರೋಗ್ಯಕ್ಕೆ ಒಳಗಾದಾಗಲೂ ಹಲವು ಬಾರಿ ಕರೆ ಮಾಡಿ ಬರುವಂತೆ ಕೇಳಿಕೊಂಡಿದ್ದೇವೆ. ಆದರೂ ನಮ್ಮೊಂದಿಗೆ ಇರುವುದಕ್ಕೆ ಒಪ್ಪಿಲ್ಲ. ನಾವು ಕೂಡ ಕಷ್ಟದಲ್ಲಿಯೇ ಜೀವನ ನಡೆಸುತ್ತಿರುವುದನ್ನು ಅವಳು ತಿಳಿದಿದ್ದಳು. ಇದೇ ಕಾರಣಕ್ಕೆ ಎಷ್ಟೇ ಕರೆದರೂ ಬರಲು ಒಪ್ಪಿರಲಿಲ್ಲ. ಆದರೆ ನಾವು ಕೈಲಾದಷ್ಟನ್ನು ಆಕೆಗೆ ನೀಡುತ್ತಿದ್ದೆವು ಎಂದಿದ್ದಾರೆ.