ಮೊಳಕಾಲ್ಮುರು:-ಕುಡಿಯಲು ಹಣ ನೀಡಿಲ್ಲವೆಂದು ತನ್ನ ಹೆತ್ತ ತಾಯಿಯನ್ನೇ ಪಾಪಿ ಮಗನು ಹತ್ಯೆ ಮಾಡಿರುವ ಘಟನೆಯು ರೊಪ್ಪ ಗ್ರಾಮದಲ್ಲಿ ಶನಿವಾರದಂದು ನಡೆದಿದೆ.
ರೊಪ್ಪ ಗ್ರಾಮದ 37 ವರ್ಷದ ಶಿವಾರೆಡ್ಡಿ ಎನ್ನುವತನು ತನ್ನ ಸ್ವಂತ ತಾಯಿಯಾದ 58 ವರ್ಷದ ಅಂಜಿನಮ್ಮ ಎಂಬುವರನ್ನು ಕೊಲೆಗೈದ ಆರೋಪಿಯಾಗಿದ್ದಾನೆ.
ಕೊಲೆ ಆರೋಪಿಯಾಗಿರುವ ಶಿವರೆಡ್ಡಿ10 ವರ್ಷಗಳಿಂದ ಮಧ್ಯಪಾನ ಮಾಡುವ ಚಟವಿದ್ದು ಕಳೆದ ಎಂಟು ವರ್ಷಗಳಿಂದ ಈತನ ಹೆಂಡತಿ ಬಿಟ್ಟು ಹೋಗಿದ್ದಳು,ಪ್ರತಿನಿತ್ಯವೂ ಕುಡಿಯುವ ಅಭ್ಯಾಸವಿದ್ದ ಈತನಿಗೆ ಮದ್ಯಪಾನ ಮಾಡಲು ದುಡ್ಡು ಕೊಡುವುದಿಲ್ಲ ಎಂದು ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದನು.
ಶನಿವಾರ ಸಾಯಂಕಾಲದಂದು ತನ್ನ ತಾಯಿಯ ಜೊತೆಗೆ ಕುಡಿಯಲು ಹಣ ನೀಡುವುದಿಲ್ಲ ಆಕ್ರೋಶಗೊಂಡು ತಾಯಿ ಅಂಜಿನಮ್ಮ ಜೊತೆ ಜಗಳವಾಡುತ್ತಾ ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ತಾಯಿಯ ಹೊಟ್ಟೆಯ ಬಲಭಾಗಕ್ಕೆ ತಿಳಿದಿದ್ದಾನೆ,ತೀವ್ರ ರಕ್ತಸ್ರಾವವಾಗಿ ಅಂಜಿನಮ್ಮ ಸಾವನ್ನಪ್ಪಿದ್ದಾಳೆ.
ಘಟನೆಗೆ ಸಂಬಂಧಪಟ್ಟಂತೆ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ
ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಾಜಣ್ಣ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ವಸಂತ ಅಸೋದೆ ಮತ್ತು ರಾಂಪುರ ಪಿಎಸ್ ಐ ಮಹೇಶ್ ಹೊಸಪೇಟೆ, ಪರಶುರಾಮ್ ಲಮಾಣಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.


