ಮೈಸೂರು : ಸುತ್ತೂರು ಜಾತ್ರಾ ಮಹೋತ್ಸವ 2ನೇ ದಿನದಂದು ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮ ಉದ್ಘಾಟನೆಯನ್ನು ಸಚಿವ ರಾಮಲಿಂಗ ರೆಡ್ಡಿ ನೆರೆವೇರಿಸಿದ್ದು ಮಠಾಧೀಶರು,ಪಾದ್ರಿ, ಕ್ರೈಸ್ತ ಧರ್ಮ ಗುರುಗಳ ಸಮ್ಮುಖದಲ್ಲಿ ನೆರವೇರಿದ ಕಾರ್ಯಕ್ರಮ ನಡೆಯಿತು.
ನೂತನ ನವ ವಧು ವರರಿಗೆ ಸುತ್ತೂರು ಶ್ರೀಗಳು ಆಶೀರ್ವದಿಸಿದ್ದು ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ದಾಂಪತ್ಯ ಜೀವನಕ್ಕೆ 135 ಜೋಡಿಗಳು ಕಾಲಿಟ್ಟಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ 4ಜೋಡಿ, ಪರಿಶಿಷ್ಟ ಜಾತಿಯ 84ಜೋಡಿ, ಪರಿಶಿಷ್ಟ ಪಂಗಡದ 15ಜೋಡಿ, ಹಿಂದುಳಿಗ ವರ್ಗದ 21ಜೋಡಿ, ಅಂತರಜಾತಿಯ 11ಜೋಡಿ ಮತ್ತು ೩ ವಿಶೇಷಚೇತನ ಜೋಡಿ ಹಾಗೂ ಮರುಮದುವೆಯಾದ 3ಜೋಡಿಗಳು ಭಾಗಿಯಾಗಿದ್ದರು. ಸರ್ವ ಧರ್ಮದ ಗುರುಗಳ ಸಮ್ಮುಖದಲ್ಲಿ ನೆರವೇರಿದ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ಇದಾಗಿದೆ.


